ಬಿಗ್ ಬಝಾರ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಮಂಗಳೂರು : ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಬಿಗ್ ಬಝಾರ್ ಬಿಜೈ ಭಾರತ್ ಮಾಲ್ ಮಹಿಳೆಯರಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ಹಾಗೂ ಸಮಾನತೆಯ ಬಗ್ಗೆ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಸುಮಂಗಳ ರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಸ್ಪಿಂಡ್ರಿಫ್ಟ್ ಕ್ಲಬ್ ನ ಮಾಲಕರಾದ ಶಿಪ್ರ ರೈ ಮತ್ತು ಕೊಡಿಯಲ್ ಬೈಲ್ ನ ಮೊಂಟೆಸರಿ ಶಾಲೆಯ ಪ್ರಿನ್ಸಿಪಾಲ್ ಸುಪ್ರಿಯಾ ಮಲ್ಲಿಕಾರ್ಜುನ್, ಬಾಲನಟಿ, ಸಿನಿಮಾ ನಾಯಕಿ ಮಜಾ ಭಾರತ ಖ್ಯಾತಿಯ ನಿರೂಪಕಿ ಆರಾಧನಾ ಭಟ್ ಹಾಗೂ ಮಂಗಳೂರಿನ ಯುಟ್ಯೂಬರ್, ತುಳು ಕನ್ನಡ ಚಿತ್ರಗಳ ಪ್ರಚಾರಕ ಸೂರಜ್ ಮಂಗಳೂರು ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮುಖ್ಯ ಅತಿಥಿಗಳು ಬಿಗ್ ಬಝಾರ್ ಆಯೋಜಿಸಿದ್ದ ಮಹಿಳಾ ಅಡುಗೆ ಸ್ಪರ್ಧೆಯ ಜಡ್ಜ್ ಗಳಾಗಿ ವಿಜೇತರಾದವಿಗೆ ಬಹುಮಾನ ವಿತರಣೆ ಮಾಡಿ ಪ್ರಶಂಸಿದರು. ಬಿಗ್ ಬಝಾರ್ ನ ಕರ್ಥ ಸಂದೇಶ್ ಕಿದಿಯೂರು ಮತ್ತು ಸಹಕರ್ಥ ಪ್ರವೀಣ್ ಕುಮಾರ್, ಆಡಳಿತ ಅಧಿಕಾರಿ ದಾಮೋದರ್ ಹಾಗು ಮಾನವ ಸಂಪನ್ಮೂಲ ಅಧಿಕಾರಿ ಶರತ್ ಮತ್ತು ಲತೇಶ್ ಸಾಲ್ಯಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.








