ವಿಟ್ಲ : ಮನೆಯಿಂದ ಚಿನ್ನಾಭರಣ ಕಳವು
ಬಂಟ್ವಾಳ, ಮಾ.9: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಭಗವಂತಕೋಡಿ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಹಸೈನಾರ್ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಸೈನಾರ್ ನೀಡಿರುವ ದೂರಿನಲ್ಲಿ, ನಾನು ಪತ್ನಿಯ ಜೊತೆ ಅಜೀಲಮೊಗರಿನಲ್ಲಿರುವ ನನ್ನ ತಂಗಿಯ ಹೋಗಿದ್ದು ಮನೆಯಲ್ಲಿ ಮಕ್ಕಳು ಮತ್ತು ಸೊಸೆಯಂದಿರು ಇದ್ದರು. ಮಾ.9ರಂದು ಬೆಳಗ್ಗೆ ಪುತ್ರ ಇಜಾಝ್ ಫೋನ್ ಕರೆ ಮಾಡಿ ನಿನ್ನೆ ರಾತ್ರಿ ನಮ್ಮ ಮನೆಯಲ್ಲಿ ಕಳ್ಳತನವಾಗಿದೆಂದು ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಕೂಡಲೇ ಮನೆಗೆ ಬಂದು ನೋಡಿದಾಗ ಮನೆಯ ಹಿಂಬದಿಯ ಬಾಗಿಲು ಮುರಿದಿದ್ದು ಮನೆಯ ಅಂತಸ್ಥಿನ ಎರಡು ಬೆಡ್ ರೂಮಿನಲ್ಲಿದ್ದ ಮೂರು ಶೀಟ್ ಕಪಾಟುಗಳ ಬಾಗಿಲನ್ನು ಮುರಿದು ಮಗಳ ಕಿವಿಯ ಬೆಂಡೋಲೆ, ಕಾಲು ಚೈನ್, ಉಂಗುರ, ಮಗುವಿನ ಆಭರಣಗಳು ಮತ್ತು 35,250 ರೂ. ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





