ಕಾಮಗಾರಿಯಲ್ಲಿ ವಿಳಂಬ ; ಜೋಕಟ್ಟೆ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ಮಂಗಳೂರು : ಜೋಕಟ್ಟೆ ರಸ್ತೆ ಕಾಮಗಾರಿ ವಿಳಂಬ ಹಾಗೂ ರೈಲ್ವೇ ಅವೈಜ್ಞಾನಿಕ ಕಾಮಗಾರಿ ವಿರುದ್ಧ ವಲಯ ಕಾಂಗ್ರೆಸ್ ಸಮಿತಿ ಹಾಗೂ ಯೂತ್ ಕಾಂಗ್ರೆಸ್ ಜೋಕಟ್ಟೆ ವತಿಯಿಂದ ಇತ್ತೀಚೆಗೆ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪಿ.ಡಬ್ಲ್ಯೂ.ಡಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇನ್ನೂ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಜೋಕಟ್ಟೆ ರೈಲ್ವೇ ಅಂಡರ್ ಪಾಸ್ ಸಮಸ್ಯೆ ಇತ್ಯರ್ಥವಾಗದೆ ಘನ ವಾಹನ ಪ್ರವೇಶವನ್ನು ತಡೆಯುವ ಕಮಾನುಗಳ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಲಾಯಿತು ಹಾಗೂ ಅವೈಜ್ಞಾನಿಕ ಕಾಮಗಾರಿಯ ಕುರಿತು ರೈಲ್ವೇ ಇಲಾಖೆಗೆ ದೂರು ನೀಡಲಾಯಿತು.
ಸ್ಥಳಕ್ಕೆ ಆಗಮಿಸಿ ದೂರು ಸ್ವೀಕರಿಸಿದ ರೈಲ್ವೇ ಅಧಿಕಾರಿಗಳು ಸದ್ಯ ಕಾಮಗಾರಿ ಸ್ಥಗಿತಗೊಳಿಸಿ ಮುಂದಿನ ನಿರ್ಧಾರಗಳಿಗಾಗಿ ಮೇಲಾಧಿ ಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
Next Story





