ಅಫ್ಘಾನ್: ಚುನಾವಣೆವರೆಗೆ ಮಧ್ಯಂತರ ಸರಕಾರ; ಅಮೆರಿಕ ಪ್ರಸ್ತಾವ
ವಾಶಿಂಗ್ಟನ್, ಮಾ. 9: ಅಫ್ಘಾನಿಸ್ತಾನದಲ್ಲಿ ಹೊಸ ಸಂವಿಧಾನ ಅಂಗೀಕಾರಗೊಳ್ಳುವವರೆಗೆ ಹಾಗೂ ಚುನಾವಣೆ ನಡೆಯುವವರೆಗೆ ಅಫ್ಘಾನಿಸ್ತಾನದ ಆಡಳಿತವನ್ನು ಮಧ್ಯಂತರ ಸರಕಾರವೊಂದು ವಹಿಸಿಕೊಳ್ಳಬೇಕು ಎಂಬ ಪ್ರಸ್ತಾವವನ್ನು ಅಮೆರಿಕ ಮುಂದಿಟ್ಟಿದೆ.
ಈ ಅವಧಿಯಲ್ಲಿ ಜಂಟಿ ಆಯೋಗವೊಂದು ಯುದ್ಧವಿರಾಮದ ಮೇಲೆ ನಿಗಾ ಇಡಬೇಕು ಎಂಬುದಾಗಿ ಅಫ್ಘಾನಿಸ್ತಾನಕ್ಕಾಗಿ ಅಮೆರಿಕ ಸಿದ್ಧಪಡಿಸಿರುವ ಕರಡು ಶಾಂತಿ ಯೋಜನೆ ತಿಳಿಸಿದೆ.
ಅಮೆರಿಕದ ವಿಶೇಷ ಅಫ್ಘಾನಿಸ್ತಾನ ರಾಯಭಾರಿ ಝಲ್ಮಾಯ್ ಖಲೀಲ್‌ಝಾದ್, ಎಂಟು ಪುಟಗಳ ‘ಮಧ್ಯಂತರ ಶಾಂತಿ ಸರಕಾರ’ ಪ್ರಸ್ತಾವವನ್ನು ಕಳೆದ ವಾರ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ, ಪ್ರತಿಪಕ್ಷ, ನಾಗರಿಕ ಸಮಾಜದ ನಾಯಕರು ಮತ್ತು ತಾಲಿಬಾನ್ ಸಂಧಾನಕಾರರ ಮುಂದಿಟ್ಟಿದ್ದಾರೆ.
Next Story





