ಒಂದೇ ದಿನದಲ್ಲಿ 20 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ಹಾಕಲಾಗಿದೆ: ಗೃಹ ಸಚಿವಾಲಯ

ಹೊಸದಿಲ್ಲಿ, ಮಾ. 9: ಮಾರ್ಚ್ 8ರಂದು 20 ಲಕ್ಷಕ್ಕೂ ಅಧಿಕ ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ಇದು ಇದುವರೆಗೆ ಒಂದೇ ದಿನ ನೀಡಲಾದ ಅತ್ಯಧಿಕ ಲಸಿಕೆ. ಇದರೊಂದಿಗೆ ದೇಶದಲ್ಲಿ ಹಾಕಲಾದ ಕೊರೋನ ಲಸಿಕೆ ಡೋಸ್‌ನ ಒಟ್ಟು ಸಂಖ್ಯೆ 2.3 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.
ಕೊರೋನಾ ಲಸಿಕೆ ನೀಡಿಕೆಯ 52 ದಿನವಾದ ಮಾರ್ಚ್ 8ರಂದು 20,19,723 ಡೋಸ್ ಲಸಿಕೆ ಹಾಕಲಾಗಿದೆ. ಇದರಲ್ಲಿ 17,15,380 ಫಲಾನುಭವಿಗಳಿಗೆ 28,884 ಬೈಠಕ್‌ಗಳಲ್ಲಿ ಮೊದಲ ಡೋಸ್ ಲಸಿಕೆ ಹಾಕಲಾಗಿದೆ ಹಾಗೂ 3,04,343 ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ. 17,15,380 ಫಲಾನುಭವಿಗಳಲ್ಲಿ 60 ವರ್ಷ ವಯೋಮಾನಕ್ಕಿಂತ ಮೇಲಿನ 12,22,321 ಹಾಗೂ 45ರಿಂದ 60ರ ನಡುವಿನ ವಯೋಮಾನದ ನಿರ್ದಿಷ್ಟ ಹಲವು ಅಸ್ವಸ್ಥಗಳಿರುವ 2,21,148 ಜನರು ಒಳಗೊಂಡಿದ್ದಾರೆ.
‘‘ಜನವರಿ 16ರಂದು ಆರಂಭಿಸಲಾದ ರಾಷ್ಟ್ರವ್ಯಾಪಿ ಕೊರೋನ ಲಸಿಕೆ ನೀಡಿಕೆಯಲ್ಲಿ ಭಾರತ ಗಮನಾರ್ಹ ಸಾಧನೆ ದಾಖಲಿಸಿದೆ. ಕೇವಲ 24 ಗಂಟೆಗಳಲ್ಲಿ 20 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ’’ ಎಂದು ಸಚಿವಾಲಯ ತಿಳಿಸಿದೆ. ಮಂಗಳವಾರ ಬೆಳಗ್ಗೆ 7 ಗಂಟೆ ವರೆಗಿನ ತಾತ್ಕಾಲಿಕ ವರದಿ ಪ್ರಕಾರ 4,05,517 ಬೈಠಕ್‌ಗಳ ಮೂಲಕ ಒಟ್ಟು 2,30,08,733 ಡೋಸ್ ಲಸಿಕೆ ನೀಡಲಾಗಿದೆ. ಇದರಲ್ಲಿ 70,75,010 (ಮೊದಲ ಡೋಸ್) ಆರೋಗ್ಯ ಕಾರ್ಯಕರ್ತರು, 37,39,478 (ಎರಡನೇ ಡೋಸ್) ಆರೋಗ್ಯ ಕಾರ್ಯಕರ್ತರು, 3,25,972 (ಎರಡನೇ ಡೋಸ್) ಮುಂಚೂಣಿ ಕಾರ್ಯಕರ್ತರು, 7,01,809 ನಲ್ವತ್ತೈದು ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ನಿರ್ದಿಷ್ಟ ಸಹ ಅಸಸ್ಥತೆಗಳು ಇರುವವರು (ಮೊದಲ ಡೋಸ್) ಹಾಗೂ 43,74,145 ಫಲಾನುಭವಿಗಳು 60 ವರ್ಷಕ್ಕಿಂತ ಮೇಲ್ಪಟ್ಟವರು ಒಳಗೊಂಡಿದ್ದಾರೆ. ಈ ನಡುವೆ ಮಹಾರಾಷ್ಟ್ರ, ಕೇರಳ, ಪಂಜಾಬ್, ತಮಿಳುನಾಡು, ಗುಜರಾತ್ ಹಾಗೂ ಕರ್ನಾಟಕದಲ್ಲಿ ವರದಿಯಾಗುತ್ತಿರುವ ಕೊರೋನ ಸೋಂಕಿನ ಹೊಸ ಪ್ರಕರಣ ಸಂಖ್ಯೆ ಏರಿಕೆಯಾಗಿದೆ.







