ಡ್ರಗ್ಸ್ ಜಾಲ ಪ್ರಕರಣ: ಸಿನೆಮಾ ನಿರ್ಮಾಪಕನ ವಿಚಾರಣೆ
ಬೆಂಗಳೂರು, ಮಾ.9: ಡ್ರಗ್ಸ್ ಜಾಲ ಆರೋಪ ಪ್ರಕರಣ ಸಂಬಂಧ ಸಿನೆಮಾ ನಿರ್ಮಾಪಕ ಶಂಕರ್ ಗೌಡ ಅವರನ್ನು ನಗರದ ಬಾಣಸವಾಡಿ ಉಪವಿಭಾಗದ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಸದಾಶಿವನಗರದಲ್ಲಿರುವ ಅವರ ಕಚೇರಿ ಮೇಲೆ ನಿನ್ನೆ ದಾಳಿ ಮಾಡಿದ್ದ ಬಾಣಸವಾಡಿ ಉಪವಿಭಾಗದ ಪೊಲೀಸರು, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಿದ್ದರು. ಅದರಂತೆ ಅವರು ವಿಚಾರಣೆಗೆ ಹಾಜರಾಗಿದ್ದು, ತನಿಖಾಧಿಕಾರಿಗಳು ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಂಡರು.
ಇತ್ತೀಚೆಗೆ ನಾಗವಾರ ಸಮೀಪ ಬಂಧಿತರಾದ ಆಫ್ರಿಕಾ ಮೂಲದ ಪೆಡ್ಲರ್ ಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಸಂಬಂಧ ಬಿಗ್ ಬಾಸ್ ಸ್ಪರ್ಧಿ ಮಸ್ತಾನ್‍ಚಂದ್ರ ಅವರನ್ನು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಆರೋಪಿ ಮಸ್ತಾನ್‍ಚಂದ್ರ ನೀಡಿರುವ ಮಾಹಿತಿಯಂತೆ ಶಂಕರಗೌಡ ಅವರ ಕಚೇರಿ ಮೇಲೆ ದಾಳಿ ಮಾಡಿ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story





