ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮ

ಮಂಗಳೂರು, ಮಾ.10: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ತಿರುವನಂತಪುರ ಮೃಗಾಲಯದಿಂದ ಎರಡು ಬಿಳಿ ರಿಯಾ, ಎರಡು ಕಂದು ರಿಯಾ ಹಾಗೂ ಮೂರು ಅಪರೂಪದ ಸ್ವಾಂಪ್ ಜಿಂಕೆಗಳ ಆಗಮನವಾಗಿದೆ.
ಇದೇ ವೇಳೆ ಪಿಲಿಕುಳ ಮೃಗಾಲಯದಿಂದ ಮೂರು ಕಾಳಿಂಗ ಸರ್ಪ ಹಾಗೂ ನಾಲ್ಕು ವಿಟೇಕರ್ಸ್ ಹಾವುಗಳನ್ನು ತಿರುವನಂತಪುರಕ್ಕೆ ವರ್ಗಾಯಿಸಲಾಗಿದೆ.
ನೂತನ ಅತಿಥಿಗಳು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವೀಕ್ಷಣೆಗೆ ಲಭ್ಯವಿದ್ದು, ರಿಯಾ ಉಷ್ಟ್ರ ಪಕ್ಷಿ ಜಾತಿಗೆ ಸೇರಿದ್ದಾಗಿದೆ. ದಕ್ಷಿಣ ಅಮೆರಿಕದ ಅತಿ ದೊಡ್ಡ ಹಾರಾಡುವ ಪಕ್ಷಿ ಇದಾಗಿದ್ದು, ಹಸಿರು ಸಸ್ಯಗಳು, ಧಾನ್ಯಗಳು, ಹುಳು ಹುಪ್ಪಟೆಗಳು ಇವುಗಳ ಆಹಾರ ಹಾಗೂ ಇವುಗಳು ಅತಿ ವೇಗವಾಗಿ ಓಡಬಲ್ಲವು. ಸ್ವಾಂಪ್ ಜಿಂಕೆಗಳ ಕೊಂಬುಗಳು ಒಂದರಿಂದ 12ರವರೆಗೆ ಕವಲು ಒಡೆದು ಬೆಳೆಯುವುದು ವಿಶೇಷ. ಇದರಿಂದ ಇವುಗಳನ್ನು ಬಾರಾಸಿಂಘಾ ಎಂದೂ ಕರೆಯುತ್ತಾರೆ. ಇವೆಲ್ಲವೂ ಅಳಿವಿನಂಚಿನಲ್ಲಿರುವ ಜೀವಿಗಳು ಎಂದು ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.
Next Story





