ಮಂಗಳೂರು : ಗಾರ್ಮೆಂಟ್ಸ್, ಶೂಗಳ ಬೃಹತ್ ಪ್ರದರ್ಶನ, ಮಾರಾಟ
ಮಂಗಳೂರು : ನಗರದಲ್ಲಿ ಇದೇ ಪ್ರಥಮ ಬಾರಿಗೆ ನೂರಕ್ಕೂ ಹೆಚ್ಚು ಪ್ರಸಿದ್ಧ ಕಂಪನಿಗಳ ಬ್ರಾಂಡೆಡ್ ಗಾರ್ಮೆಂಟ್ಸ್ ಮತ್ತು ಶೂಗಳ ಪ್ರದರ್ಶನ ಮತ್ತು ಮಾರಾಟ ಮೇಳ ಒಂದೇ ಸೂರಿನಡಿ ಆಯೋಜಿಸಲಾಗಿದೆ.
ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಮಾ.12ರಿಂದ ಮಾ.14 ವರೆಗೆ ಬೆಳಗ್ಗೆ 10ರಿಂದ ರಾತ್ರಿ 9 ಗಂಟೆ ವರೆಗೆ ಈ ಮಾರಾಟ ಮತ್ತು ಪ್ರದರ್ಶನ ನಡೆಯಲಿದ್ದು, ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರದಲ್ಲಿ ಅಂದರೆ ಶೇ.80ರ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಕೇವಲ ಮೂರು ದಿನಗಳ ವರೆಗೆ ಮಾತ್ರ ಈ ಮೇಳ ನಡೆಯಲಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.
ಕೋವಿಡ್ 19 ಕಾರಣದಿಂದ ದೇಶದಾದ್ಯಂತ ಲಾಕ್ ಡೌನ್ ಇದ್ದುದರಿಂದ ಕೋಟ್ಯಂತರ ರೂ. ಬೆಲೆ ಬಾಳುವ ಗಾರ್ಮೆಂಟ್ಸ್‌ಗಳು ಹಾಗೂ ಶೂಗಳು ಗೋಡೋನ್‌ನಲ್ಲಿ ಬಾಕಿಯಾಗಿತ್ತು. ಇದನ್ನು ಕಂಪನಿಗಳು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ನೀಡಲು ಈ ಮೇಳ ಆಯೋಜಿಸಲಾಗಿದೆ. ರಿಟೇಲ್‌ನಲ್ಲಿ 4 ಸಾವಿರ ರೂ. ಇರುವ ಗಾರ್ಮೆಂಟ್ಸ್‌ಗಳು ಈ ಮೇಳದಲ್ಲಿ ಕೇವಲ 350 ರೂ. ನಿಂದ 550 ರೂ. ಒಳಗಡೆ ದರದಲ್ಲಿ ಲಭಿಸಲಿದೆ. ಬ್ರಾಂಡೆಡ್ ಫಾರ್ಮಲ್ ಶರ್ಟ್ ಕೇವಲ 650 ರೂ. ನಿಂದ 1 ಸಾವಿರ ರೂ. ಒಳಗಡೆ ಲಭ್ಯವಿದೆ. ಶೇ.100 ಬ್ರಾಂಡೆಡ್ ಲೆದರ್ ಶೂಗಳು ಕೇವಲ 1,200 ರೂ. ದರದಲ್ಲಿ ಲಭ್ಯವಿದೆ.
ದೇಶ, ವಿದೇಶದ ಪ್ರಖ್ಯಾತ ಕಂಪನಿಗಳ ಉತ್ಪನ್ನಗಳು ಈ ಮೇಳದಲ್ಲಿ ಇರಲಿದ್ದು, ರಿಯಾಯಿತಿ ದರದಲ್ಲಿ ಖರೀದಿಗೆ ಗ್ರಾಹಕರಿಗೆ ಇದೊಂದು ಸುವರ್ಣಾವಕಾಶವಾಗಲಿದೆ. ನಗರದ ಟಿಎಂಎ ಪೈ ಕನ್ವೆನ್ಶಲ್‌ನಲ್ಲಿ ಈ ಮೇಳ ನಡೆಯಲಿರುವುದರಿಂದ ಗ್ರಾಹಕರಿಗೆ ಸಾಕಷ್ಟು ಪಾರ್ಕಿಂಗ್ ಸೌಲಭ್ಯ ಇದೆ. ಗ್ರಾಹಕರು ಖರೀದಿಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿದಂತೆ ಎಲ್ಲ ಡಿಜಿಟಲ್ ಪಾವತಿ ಸೌಲಭ್ಯವನ್ನು ಬಳಸಿಕೊಳ್ಳಬಹುದು.







