ಭಟ್ಕಲ್: ಮರ್ಕಝಿ ಖಲೀಫಾ ಜಮಾತುಲ್ ಮುಸ್ಲಿಮೀನ್ ನೂತನ ಪದಾಧಿಕಾರಿಗಳ ನೇಮಕ
ಭಟ್ಕಳ: ಇಲ್ಲಿನ ಮರ್ಕಝಿ ಖಲೀಫಾ ಜಮಾತುಲ್ ಮುಸ್ಲಿಮೀನ್ ಸಂಸ್ಥೆಯ ಮೂರು ವರ್ಷಗಳ ಅವಧಿಗಾಗಿ ಪದಾಧಿಕಾರಿಗಳ ನೇಮಕ ನಡೆದಿದ್ದು ಅಧ್ಯಕ್ಷರಾಗಿ ಸಿದ್ದೀಕ್ ಮುಹಮ್ಮದ್ ಮೀರಾ ಮತ್ತು ಜುಬಾಪು ಮುಹಮ್ಮದ್ ಇಸ್ಮಾಯಿಲ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಡಾ.ಕೋಲಾ ಮುಹಮ್ಮದ್ ಜುಬೈರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ವೀಕ್ಷಕರಾಗಿ ಜುಬಾಪು ಇಸ್ಮಾಯಿಲ್ ಅವರು ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು.
ಉಪಾಧ್ಯಕ್ಷ -1: ಎಸ್‍ಎಂ ಸೈಯದ್ ಮೊಹಿಯುದ್ದೀನ್, ಉಪಾಧ್ಯಕ್ಷ -2: ಡಾ.ಕೋಲಾ ಮುಹಮ್ಮದ್ ಜುಬೈರ್, ಇದರಲ್ಲಿ ಈ ಕೆಳಗಿನ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ: ಇಸ್ಮಾಯಿಲ್ ಅಂಜುಮ್ ಗಂಗವಾಲಿ ನದ್ವಿ, ಜಂಟಿ ಕಾರ್ಯದರ್ಶಿ: ಸಿದ್ದಿಬಾಪ ಮುಹಮ್ಮದ್ ತಲ್ಹಾ ಸಿದ್ದಿಬಾಪ, ಹಣಕಾಸು ಕಾರ್ಯದರ್ಶಿ: ಸಿದ್ದೀಕ್ ಅಬ್ದುಲ್ ಖಾದಿರ್ ಜಿಲಾನಿ, ಖಜಾಂಚಿ: ಮಹಮ್ಮದ್ ನಾಸಿರ್ ಮೊಹತಾಶಮ್ ಅಕೌಂಟೆಂಟ್: ಕೋಲಾ ಮುಹಮ್ಮದ್ ಹಾಶಿಮ್ ರನ್ನು ಸರ್ವಾನುಮತದೊಂದ ಆಯ್ಕೆ ಮಾಡಲಾಯಿತು.
Next Story





