ಅಮೆರಿಕದ ಅರ್ಕಾನ್ಸಸ್ ರಾಜ್ಯದಲ್ಲಿ ಸಂಪೂರ್ಣ ಗರ್ಭಪಾತ ನಿಷೇಧ

ಸಾಂದರ್ಭಿಕ ಚಿತ್ರ
ವಾಶಿಂಗ್ಟನ್, ಮಾ. 10: ಗರ್ಭಪಾತವನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನನ್ನು ಅಮೆರಿಕದ ಅರ್ಕಾನ್ಸಸ್ ರಾಜ್ಯ ಮಂಗಳವಾರ ಅಂಗೀಕರಿಸಿದೆ. ಅತ್ಯಾಚಾರದಿಂದ ಅಥವಾ ಖಾಸಾ ಸಂಬಂಧಿಕರಿಂದಲೇ ಉಂಟಾದ ಗರ್ಭವನ್ನೂ ಗರ್ಭಪಾತ ಮಾಡಿಸಲು ಈ ಕಾನೂನಿನಲ್ಲಿ ಅವಕಾಶ ಇರದಿರುವುದು ವಿಶೇಷವಾಗಿದೆ.
ಆದರೆ, ತಾಯಿಯ ಪ್ರಾಣವನ್ನು ಉಳಿಸಬೇಕಾದ ತುರ್ತು ವೈದ್ಯಕೀಯ ಪ್ರಕರಣಗಳಲ್ಲಿ ಮಾತ್ರ ಗರ್ಭಪಾತಕ್ಕೆ ಹೊಸ ಕಾನೂನು ಅವಕಾಶ ನೀಡುತ್ತದೆ ಎಂದು ಅರ್ಕಾನ್ಸಸ್ ಗವರ್ನರ್ ಆ್ಯಸ ಹಚಿಸನ್ ಹೇಳಿದರು.
ಈ ಕಾನೂನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ನಾಗರಿಕ ಹಕ್ಕುಗಳ ಸಂಘಟನೆ ಎಸಿಎಲ್ಯು ಹೇಳಿದೆ.
Next Story





