ಉಡುಪಿ: ಫ್ಯಾಬ್ ಲೈಫ್ ಗ್ಲೋಬಲ್ ಮಾರ್ಕೆಟಿಂಗ್ ವತಿಯಿಂದ ಆಯುರ್ವೇದ, ವೆಲ್ನೆಸ್ ಉತ್ಪನ್ನಗಳು ಬಿಡುಗಡೆ

ಉಡುಪಿ : ಫ್ಯಾಬ್ ಲೈಫ್ ಗ್ಲೋಬಲ್ ಮಾರ್ಕೆಟಿಂಗ್ ಪ್ರೈ. ಲಿ. ಹಾಗೂ ಅಲ್ಪೈನ್ ಅಸೋಸಿಯೇಟ್ಸ್ ಮಂಗಳೂರು ವತಿಯಿಂದ ಆಯುರ್ವೇದ / ವೆಲ್ನೆಸ್ ಉತ್ಪನ್ನಗಳನ್ನು ಉಡುಪಿಯ ಪ್ರತಿಷ್ಠಿತ ಹೋಟೆಲ್ ಮಣಿಪಾಲ ಇನ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಇಬ್ರಾಹಿಂ ಸಾಹೇಬ್ ಕೋಟ, ಪಾರ್ಶ್ವನಾಥ ಸ್ವಾಮಿ ಮತ್ತು ಶ್ರೀ ಪದ್ಮಾವತಿ ಬಸದಿ ಬೊಳಂಬಳ್ಳಿ ಬೈಂದೂರಿನ ಧರ್ಮದರ್ಶಿ ಧರ್ಮರಾಜ ಜೈನ್ ಹಾಗೂ ಸ್ಟೆಲ್ಲಾ ಮಾರಿಸ್ ಚರ್ಚ್ ಕಲ್ಮಾಡಿ ಉಡುಪಿಯ ಧರ್ಮಗುರುಗಳಾದ ರೆ. ಫಾ. ಅಲ್ಬನ್ ಡಿ'ಸೋಜಾ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿದರು.
ವೇದಿಕೆಯಲ್ಲಿ ವಿಶೇಷ ಅಥಿತಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕ್ಟರೇಟ್ ಪುರಸ್ಕೃತ, ಪ್ರತಿಷ್ಠಿತ ನೈಟ್ ಹುಡ್ ಪ್ರಶಸ್ತಿ, ರಾಷ್ಟೀಯ ಉದ್ಯೋಗ ರತನ್ ಪ್ರಶಸ್ತಿ, ಭಾರತ್ ಗೌರವ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್ ಎಚ್ ಕುಲಕರ್ಣಿಯವರು ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯದ ಕಾಳಜಿಯ ಬಗ್ಗೆ ವಿಸ್ತಾರವಾಗಿ ವಿವರಿಸಿದರು ಹಾಗೂ ಫ್ಯಾಬ್ ಲೈಫ್ ನ ಆಯುರ್ವೇದ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಧಿಗಳಾಗಿ ಶ್ರೀ ರವಿಕಿರಣ್ ಮುರುಡೇಶ್ವರ, ಖ್ಯಾತ ವಕೀಲರು ಕುಂದಾಪುರ, ಶ್ರೀ ಶಶಿಧರ ಹೆಮ್ಮಾಡಿ, ಅಧ್ಯಕ್ಷರು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಡಾ. ವೀಣಾ ಕಾರಂತ್, ಅಧ್ಯಕ್ಷರು ಕರ್ನಾಟಕ ರಾಜ್ಯ ಆಯುಷ್ ಮೆಡಿಕಲ್ ಆಫೀಸರ್ಸ್ ಅಸೋಸಿಯೇಷನ್ ಉಡುಪಿ ಜಿಲ್ಲೆ, ಡಾ. ಪ್ರಿಯದರ್ಶಿನಿ ರೈ, ಮಿಸ್ಸೆರ್ಸ್ ವರ್ಲ್ಡ್ ಸೂಪರ್ ಮಾಡೆಲ್ 2019, ಮೊಹಮ್ಮದ್ ರಫೀಕ್, ನಿವೃತ್ತ ಮುಖ್ಯೋಪಾದ್ಯಾಯರು, ಓಂ ಗುರು ಬಸ್ರೂರು, ನಟ ಮತ್ತು ನಿರ್ದೇಶಕ ಕನ್ನಡ ಚಿತ್ರರಂಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಆಯುರ್ವೇದ ಕಾಲೇಜು ಹಾಗು ಆಸ್ಪತ್ರೆಯ ದಿ. ಡಾ. ಶ್ರೀನಿವಾಸ ಆಚಾರ್ಯ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು.
ಇಬ್ರಾಹಿಂ ಮೌಲಾನಾ, ಸಂಜಯ ಜಿ.ವಿ. ಬೆಂಗಳೂರು ಹಾಗೂ ಮೌಲಾನಾ ಝಮೀರ್ ಅಹ್ಮದ್ ರಶದಿ ಅವರಿಗೆ ಸಮಾಜ ಸೇವೆಗಾಗಿ ಸನ್ಮಾನ ಮಾಡಲಾಯಿತು. ಮೌಲಾನಾ ಝಮೀರ್ ಅಹ್ಮದ್ ರಶದಿ ಪ್ರಾರ್ಥಿಸಿದರು, ಮುಜಾಹಿದ್ ನಾಖುದ ಸ್ವಾಗತಿಸಿದರು, ವಸಂತ ಗಂಗೊಳ್ಳಿ ವಂದಿಸಿದರು ಹಾಗೂ ಜೇನಿಷಾ ಉಡುಪಿ ಕಾರ್ಯಕ್ರಮವನ್ನು ನಿರೂಪಿಸಿದರು.
ಅಲ್ಪೈನ್ ಅಸೋಸಿಯೇಟ್ಸ್ ಮಂಗಳೂರಿನ ಮಾಲಕರಾದ ಝಹೀರ್ ಅಹ್ಮದ್ ನಾಖುದಾ ಹಾಗೂ ಫ್ಯಾಬ್ಲೈಫ್ ಗ್ಲೋಬಲ್ ಮಾರ್ಕೆಟಿಂಗ್ ನ ಪಾಲುದಾರರಾದ ಜಿ ರೆಹಾನ್ ಅಹ್ಮದ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.






.jpeg)



