"ಎಲ್ಲರೂ ಶಾಂತಿ ಕಾಪಾಡಿ": ಆಸ್ಪತ್ರೆಯಿಂದಲೇ ವೀಡಿಯೋ ಮೂಲಕ ಮನವಿ ಮಾಡಿದ ಮಮತಾ ಬ್ಯಾನರ್ಜಿ

Photo: ANI
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆಗೆ ಮತ್ತು ಪ್ರಚಾರಕ್ಕೆ ತೆರಳಿದ್ದ ವೇಳೆ ಅವರ ಮೇಲೆ ದಾಳಿ ನಡೆದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಮ್ಮ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಶಾಂತಿ ಕಾಪಾಡುವಂತೆ ಆಸ್ಪತ್ರೆಯಿಂದಲೇ ವೀಡಿಯೋ ಮೂಲಕ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
"ಎಲ್ಲರೂ ಶಾಂತಿ ಕಾಪಾಡಿ. ಯಾರಿಗಾದರೂ ತೊಂದರೆಯಾಗುವ ರೀತಿಯಲ್ಲಿ ಯಾರೂ ವರ್ತಿಸಬೇಡಿ. ನಾನು ಎರಡು ಮೂರು ದಿನಗಳಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತೇನೆ. ನನ್ನ ಕೈ, ಕಾಲು ಮತ್ತು ಮೂಳೆಗಳಿಗೆ ಗಾಯವಾಗಿದೆ. ಕಾರಿನ ಬಳಿ ನಾನು ನಿಂತಿದ್ದಾಗ ನನ್ನನ್ನು ಬಲವಾಗಿ ತಳ್ಳಲಾಗಿದೆ. ನಾನೀಗ ಸದ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ. ಆದಷ್ಟು ಬೇಗ ನಾನು ಕೋಲ್ಕತ್ತದಿಂದ ತೆರಳುತ್ತೇನೆ" ಎಂದು ಮಮತಾ ಬ್ಯಾನರ್ಜಿ ವೀಡಿಯೋದಲ್ಲಿ ಹೇಳಿದ್ದಾಗಿ ANI ವರದಿ ಮಾಡಿದೆ.
Get well soon Didi https://t.co/Sk4Gv0zbQ8
— Saket (@Saketojha7) March 11, 2021





