ಬಿಸಿ ರೋಡ್: ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ನಲ್ಲಿ ಉಚಿತ ಸ್ತನ ಕ್ಯಾನ್ಸರ್, ಗರ್ಭ ಕೊರಳ ತಪಾಸಣೆ ಶಿಬಿರ
ಬಿ ಸಿ ರೋಡ್ : ಬಿಸಿ ರೋಡ್ ಎಂ.ಕೆ. ಟವರ್ ನಲ್ಲಿ ಕಾರ್ಯಾಚರಿಸುತ್ತಿರುವ ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ಪಾಲಿಕ್ಲಿನಿಕ್ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿವಿಧ ಸ್ತ್ರೀ ರೋಗಗಳ ತಪಾಸಣೆ ಶಿಬಿರ ಹಮ್ಮಿಕೊಂಡಿದೆ.
ಇದರ ಅಂಗವಾಗಿ ಮಾ. 12ರಂದು ಅಪರಾಹ್ನ 4ರಿಂದ 6ರವರೆಗೆ ಮತ್ತು ರವಿವಾರ ಪೂರ್ವಾಹ್ನ 9.30ರಿಂದ 12ರವರೆಗೆ ಡಾ. ಸಾರ ನೌಶಾದ್ ಉಚಿತ ಚಿಕಿತ್ಸೆ ನೀಡಲಿದ್ದಾರೆ.
ಡಾ ಸಾರ ನೌಶಾದ್ ಹೆರಿಗೆ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ ಕ್ಯಾಲಿಕಟ್ ಮೆಡಿಕಲ್ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದಿದ್ದು ಸದ್ರಿ ವಿಷಯದಲ್ಲಿ ವಿಪುಲ ತಜ್ಞತೆಯನ್ನು ಹೊಂದಿದ್ದಾರೆ.
ಮಾ.15ರವರೆಗೆ ದರ ಕಡಿತ ರೋಗ ತಪಾಸಣಾ ಸೌಲಭ್ಯ ಕೂಡಾ ಇಲ್ಲಿ ನೀಡಲಾಗುತ್ತಿದ್ದು, ಕೇವಲ 850 ರೂ.ಗೆ ಸ್ತನ ಕ್ಯಾನ್ಸರ್, ಗರ್ಭಕೊರಳ ಕ್ಯಾನ್ಸರ್, ರಕ್ತಹೀನತೆ, ಮಧುಮೇಹ, ಥೈರಾಯಿಡ್ ಸಮೇತ ಹಲವು ರೋಗಗಳ ಚೆಕ್ ಅಪ್ ಮಾಡಿಸಬಹುದು.
ಡಾ. ಸಾರಾ ನೌಶಾದ್ ಅವರ ವೈದ್ಯಕೀಯ ಸೇವೆ ಲೈಫ್ ಲೈನ್ ಸಂಸ್ಥೆಯ ಕಣ್ಣೂರಿನ ಪಾಲಿ ಕ್ಲಿನಿಕ್ ನಲ್ಲಿ ಕೂಡಾ ಲಭ್ಯವಿದೆ. ಎರಡೂ ಕಡೆಗಳಲ್ಲಿ ಉತ್ತಮ ಗುಣಮಟ್ಟದ ಔಷಧಿ ಒದಗಿಸುವ ಲೈಫ್ ಲೈನ್ ಫಾರ್ಮಸಿ ಸೌಲಭ್ಯ ಹಾಗೂ ಅಲ್ಟ್ರಾ ಸೌಂಡ್ ಸ್ಕ್ಯಾನ್, ಎಕೋ ಸ್ಕ್ಯಾನ್, ಇಸಿಜಿ, ಎಕ್ಸ್ ರೇ, ಆಪ್ಟಿಕಲ್ ಸ್ಟೋರ್ ಸಹಿತ ಸರ್ವ ರೀತಿಯ ತಪಾಸಣಾ ಸೌಲಭ್ಯ ಇರುವ ಸುಸಜ್ಜಿತ ಲ್ಯಾಬ್ ಕಾರ್ಯ ನಿರ್ವಹಿಸುತ್ತಿದೆ. ಚಿಕಿತ್ಸೆ ಮತ್ತು ತಪಾಸಣೆ ಬಯಸುವವರು ಮುಂಗಡ ಬುಕ್ಕಿಂಗ್ ಮಾಡಲು 9686246244 ಕರೆ ಮಾಡಲು ಪ್ರಕಟನೆ ತಿಳಿಸಿದೆ.







