ದಿ.ಅಹ್ಮದ್ ಮಾಸ್ಟರ್-ಪಳ್ಳಿ ಜಯರಾಮ ಶೆಟ್ಟಿ ಸ್ಮಾರಕ ಫುಟ್ಬಾಲ್ ಪಂದ್ಯಾಟಕ್ಕೆ ಚಾಲನೆ

ಮಂಗಳೂರು, ಮಾ.11: ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ವತಿಯಿಂದ ನಡೆಯುವ ದಿ.ಅಹ್ಮದ್ ಮಾಸ್ಟರ್ ಸ್ಮಾರಕ ಎ ಡಿವಿಜನ್ ಹಾಗೂ ದಿ.ಪಳ್ಳಿ ಜಯರಾಂ ಶೆಟ್ಟಿ ಸ್ಮಾರಕ ಬಿ ಡಿವಿಜನ್ ಫುಟ್ಬಾಲ್ ಲೀಗ್ ಪಂದ್ಯಾಟಕ್ಕೆ ಗುರುವಾರ ಮಾಜಿ ಅಂತರ್ ರಾಷ್ಟ್ರೀಯ ಗೋಲ್‌ಕೀಪರ್ ಶೇಖರ್ ಬಂಗೇರ ಬಾಲನ್ನು ಕಿಕ್ ಮಾಡುವ ಚಾಲನೆ ನೀಡಿದರು.
ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಿ.ಎಂ.ಅಸ್ಲಂ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಶನ್‌ನ ಉಪಾಧ್ಯಕ್ಷ ಚೇತನ್ ಬೆಂಗರೆ. ಖಜಾಂಚಿ ಅನಿಲ್ ಪಿ.ವಿ., ಜತೆ ಕಾರ್ಯದರ್ಶಿ ಫಿರೋಝ್ ಉಳ್ಳಾಲ, ಬಾಲಕೃಷ್ನ ಪೈ, ಲಯನ್ ಆನಂದ್ ಶೆಟ್ಟಿ, ರಾಜ್ಯ ಫುಟ್ಬಾಲ್ ಅಸೋಸಿಯೇಶನ್‌ನ ಪ್ರತಿನಿಧಿ ವಿಜಯ ಸುವರ್ಣ, ಮಾಜಿ ಫುಟ್ಬಾಲ್ ಆಟಗಾರ ಹರಿಶ್ಚಂದ್ರ ಬೆಂಗರೆ, ಆರಿಫ್ ಉಚ್ಚಿಲ, ಶಿವರಾಮ್ ಎ. ಫಯಾಝ್, ಜೀವನ್, ಯುವರಾಜ್ ಬೆಂಗರೆ ಮತ್ತು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸದಸ್ಯರು, ಟೂರ್ನಮೆಂಟ್ ಕಮಿಟಿಯ ಸದಸ್ಯರು ಉಪಸ್ತಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಹುಸೇನ್ ಬೋಳಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Next Story





