ಬಸ್‌ನಿಂದ ಬಿದ್ದು ವಿದ್ಯಾರ್ಥಿ ಗಾಯ
ಮಂಗಳೂರು, ಮಾ.11: ನಗರದ ಜಪ್ಪು ಮೋರ್ಗನ್ಸ್‌ಗೇಟ್‌ನ ಲೋಬೋ ಬೇಕರಿ ಸಮೀಪ ಬುಧವಾರ ಬಸ್‌ನಿಂದ ಬಿದ್ದು ವಿದ್ಯಾರ್ಥಿ ಗಾಯಗೊಂಡ ಘಟನೆ ನಡೆದಿದೆ.
ಮುಳಿಹಿತ್ಲು ನಿವಾಸಿ ರಾಲ್‌ಸ್ಟನ್ ಮಿನೇಜಸ್ (13) ಗಾಯಾಳು.
ಶಾಲೆಯಲ್ಲಿ ಪರೀಕ್ಷೆ ಮುಗಿಸಿ ಮಧ್ಯಾಹ್ನ ಖಾಸಗಿ ಬಸ್ ಹತ್ತಿದ ರಾಲ್‌ಸ್ಟನ್ ಲೋಬೋ ಬೇಕರಿ ಬಳಿ ಮಾರ್ಗನ್ಸ್‌ಗೇಟ್ ಕಡೆಗೆ ಹೋಗುವ ರಸ್ತೆಯಲ್ಲಿ ಇಳಿಯಲು ಪ್ರಯತ್ನಿಸಿದ್ದರು. ಆಗ ಬಸ್‌ನ ನಿರ್ವಾಹಕನ ಸೂಚನೆಗೂ ಕಾಯದೆ ಚಾಲಕನು ಬಸ್‌ನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ರಾಲ್‌ಸ್ಟನ್ ಕೆಳಗೆ ಬಿದಿದ್ದು, ಅವರ ಎಡ ಕೈ ಮತ್ತು ಎಡಕಾಲಿಗೆ ಗಾಯಗಳಾಗಿವೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಈ ಕುರಿತು ಸಂಚಾರ ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





