Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಒಂದು ಸುಳ್ಳು ಪ್ರಕರಣ ನನ್ನ ಜೀವನವನ್ನೇ...

ಒಂದು ಸುಳ್ಳು ಪ್ರಕರಣ ನನ್ನ ಜೀವನವನ್ನೇ ನುಂಗಿತು!: 'ಯುಎಪಿಎ' ನರಕಯಾತನೆ ಬಿಚ್ಚಿಟ್ಟ ಸಯ್ಯದ್ ಸಾದಿಕ್ ಸಮೀರ್

2 ದಶಕಗಳ ಕಾಲ ಕಾನೂನು ಹೋರಾಟ ಮಾಡಿ ಖುಲಾಸೆಗೊಂಡ ವ್ಯಕ್ತಿ

ವಾರ್ತಾಭಾರತಿವಾರ್ತಾಭಾರತಿ11 March 2021 9:03 PM IST
share
ಒಂದು ಸುಳ್ಳು ಪ್ರಕರಣ ನನ್ನ ಜೀವನವನ್ನೇ ನುಂಗಿತು!: ಯುಎಪಿಎ ನರಕಯಾತನೆ ಬಿಚ್ಚಿಟ್ಟ ಸಯ್ಯದ್ ಸಾದಿಕ್ ಸಮೀರ್

ಬೆಂಗಳೂರು, ಮಾ.11: ಎಳ್ಳಷ್ಟು ಮಾಡದ ತಪ್ಪಿಗೆ ಯುಎಪಿಎ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ, ನನ್ನ ಅರ್ಧ ಜೀವನವನ್ನೆ ಸರ್ವನಾಶ ಮಾಡಲಾಯಿತು ಎಂದು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ(ಯುಎಪಿಎ) ಬಂಧನಕ್ಕೊಳಗಾಗಿ ಸತತ ಎರಡು ದಶಕಗಳ ಕಾಲ ಕಾನೂನು ಹೋರಾಟದ ಮೂಲಕ ಖುಲಾಸೆಗೊಂಡಿರುವ ಸಯ್ಯದ್ ಸಾದಿಕ್ ಸಮೀರ್ ಭಾವುಕರಾಗಿ ನುಡಿದರು.

ಯುಎಪಿಎ ಕಾಯ್ದೆಯಲ್ಲಿ ತಾನು ಸಿಲುಕಿದ ಸನ್ನಿವೇಶ, ಹಲವು ವರ್ಷಗಳ ಕಾನೂನು ಹೋರಾಟ, ಹೀಗೆ ಹತ್ತಾರು ನೈಜ ಘಟನೆಗಳ ಕುರಿತು ‘ವಾರ್ತಾಭಾರತಿ'ಯೊಂದಿಗೆ ಹಂಚಿಕೊಂಡ ಅವರು, ಗುಜರಾತಿನ ಸೂರತ್ ನಗರದಲ್ಲಿ ಆಲ್ ಇಂಡಿಯಾ ಮೈನಾರಿಟಿ ಎಜುಕೇಷನ್ ಬೋರ್ಡ್ ವತಿಯಿಂದ 2001ನೆ ಸಾಲಿನಲ್ಲಿ ‘ಶಿಕ್ಷಣ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಇದರಲ್ಲಿ ನಾನು ಸಹ ಪಾಲ್ಗೊಂಡಿದ್ದೆ. ಆದರೆ, ಸುಳ್ಳು ಆರೋಪಗಳ ಸುರಿಮಳೆಗೈದು ನನ್ನನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿದರು.

ಇದಾದ ಬಳಿಕ ನಾನು ‘ಅಲ್‍ಖೈದಾ' ಸೇರಿದಂತೆ ಇನ್ನಿತರೆ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದೇನೆ ಎಂದು ಬಿಂಬಿಸಲಾಯಿತು. ಇದರ ಪರಿಣಾಮ ಒಂದೆರಡು ವರ್ಷ ಜೈಲಿನಲ್ಲಿಯೇ ಇದ್ದೆ, ತದನಂತರ ಜಾಮೀನು ದೊರೆಯಿತು. ಅಲ್ಲಿಂದ ಇಲ್ಲಿಯವರೆಗೆ, ಸತತ ಇಪ್ಪತ್ತು ವರ್ಷಗಳ ಕಾಲ ಕಾನೂನು ಹೋರಾಟ ಮಾಡಬೇಕಾಯಿತು ಎಂದು ನುಡಿದರು.

ಪ್ರಮುಖವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಎಂದು ಆರೋಪಿಸಿ 2008ನೆ ಸಾಲಿನಲ್ಲಿ ಸಿಓಡಿ ಪೊಲೀಸರು ಬಂಧಿಸಿ ಹುಬ್ಬಳ್ಳಿ ಜೈಲಿಗೆ ಕಳುಹಿಸಿದರು. ಈ ಪ್ರಕರಣದಲ್ಲಿ ನನ್ನದು ಎಳ್ಳಷ್ಟು ಪಾತ್ರವಿಲ್ಲ. ಆದರೂ, ಉದ್ದೇಶಪೂರ್ವಕವಾಗಿಯೇ ಬಂಧಿಸಲಾಗಿತ್ತು. ಈ ಕುರಿತು ಅಂದಿನ ಐಪಿಎಸ್ ಅಧಿಕಾರಿಯೊಬ್ಬರು ‘ನೀನು ಶಂಕಿತ ಉಗ್ರನೆಂದು ಈಗಾಗಲೇ ಮಾಧ್ಯಮಗಳಲ್ಲಿ ಬಂದಿದೆ. ಈಗ ನಿನ್ನನ್ನು ಕೈಬಿಡಲು ಸಾಧ್ಯವಿಲ್ಲ. ಹಾಗಾಗಿ ಸಣ್ಣ ಪ್ರಕರಣದಲ್ಲಿ ಬಂಧಿಸಿ, ಮೂರು ತಿಂಗಳಿನಲ್ಲಿಯೇ ಜಾಮೀನು ದೊರೆಯುವಂತೆ ಮಾಡುತ್ತೇನೆಂದು' ನಂಬಿಕೆಯ ಮಾತುಗಳನ್ನಾಡಿದ್ದರು.

ಅದನ್ನು ನಂಬಿದ ನಾನು ಮೂರು ತಿಂಗಳು ಕಾಲ ಜೈಲಿನಲ್ಲಿಯೇ ಕಾದಿದ್ದೆ. ಆದರೆ, ಅಧಿಕಾರಿಯ ಮಾತು ಸುಳ್ಳು ಎಂದು ನಿಧಾನಕ್ಕೆ ಗೊತ್ತಾಯಿತು. ಅಷ್ಟೇ ಏಕೆ, ತನಿಖಾಧಿಕಾರಿಗಳು ಸಲ್ಲಿಸಿದ್ದ ಚಾರ್ಜ್‍ಶೀಟ್‍ನಲ್ಲೂ ಹಲವು ಆರೋಪಗಳನ್ನು ಕಂಡು ಮೂಕ ಪ್ರೇಕ್ಷಕನಾದೆ ಎಂದು ಅವರು ತಿಳಿಸಿದರು.

ತದನಂತರ, 2011ರಲ್ಲಿ ಈ ಸಿಓಡಿ ಪ್ರಕರಣದಲ್ಲಿ ಜಾಮೀನು ಸಿಕ್ಕಿದರೂ, 2015ರವರೆಗೂ ವಿಚಾರಣೆಗೆ ನಿರಂತರ ಹಾಜರಾಗಬೇಕಿತ್ತು. ತಿಂಗಳಿಗೊಮ್ಮೆ ದೂರದ ಸೂರತ್, ಹುಬ್ಬಳ್ಳಿಗೆ ಹೋಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಬೆಂಗಳೂರಿನಲ್ಲಿ ನನ್ನ ಕುಟುಂಬ, ಉದ್ಯೋಗ, ಸ್ನೇಹಿತರು, ಪರಿಚಯಸ್ಥರು ಎಲ್ಲರೂ ಕೆಲಕಾಲ ದೂರವಾದರು. ಆದರೆ, ನನ್ನ ಮೇಲಿನ ಗಂಭೀರ ಆರೋಪವನ್ನು ತೊಡೆದುಕೊಳ್ಳಲೇಬೇಕೆಂಬ ಛಲದಿಂದ ಕಾನೂನು ಹೋರಾಟ ನಡೆಸಿದೆ ಎಂದು ಸಯ್ಯದ್ ಸಾದಿಕ್ ಸಮೀರ್ ನುಡಿದರು.

ಸೇವೆ ಸಲ್ಲಿಸುವವರೇ ಟಾರ್ಗೆಟ್: ಯಾರು ಹೆಚ್ಚಾಗಿ ಸಮುದಾಯಕ್ಕೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಸಂಘಟನಾ ದೃಷ್ಟಿಕೋನದಲ್ಲಿ ಸೇವೆ ಸಲ್ಲಿಸುತ್ತಾರೋ, ಅದರಲ್ಲೂ ಮುಸ್ಲಿಮರು, ಶೋಷಿತರು ಹಾಗೂ ಅಲ್ಪಸಂಖ್ಯಾತರ ಏಳಿಗೆಗೆ ದುಡಿಯುತ್ತಾರೋ ಅವರನ್ನೇ ಗುರಿಯಾಗಿಸಿಕೊಂಡು ಈ ರೀತಿಯ ಸುಳ್ಳು ಮೊಕದ್ದಮೆ ದಾಖಲಿಸಿ, ಅವರನ್ನು ಅಂತ್ಯಗೊಳಿಸುತ್ತಾರೆ. ಇದಕ್ಕೆ ನಾನೇ ತಾಜಾ ಉದಾಹರಣೆ ಎಂದು ಅವರು ಹೇಳಿದರು.

ಯೌವನವೇ ಹೋಯಿತು: ಈ ಪ್ರಕರಣಗಳು ನಡೆದಾಗ, ಆಗಷ್ಟೇ ಡಿಪ್ಲೋಮಾ ಇಂಜಿನಿಯರ್ ಪದವಿ ಪೂರ್ಣಗೊಳಿಸಿದ್ದೆ. ನಾನು ಶಿಕ್ಷೆಗೆ ಗುರಿಯಾದ ಸಂದರ್ಭದಲ್ಲಿ ಯುವಕನಾಗಿದ್ದೆ. ನನ್ನಲ್ಲಿ ಹಲವು ಆಸೆ, ಆಕಾಂಕ್ಷೆಗಳಿದ್ದರೂ, ಏನು ಮಾಡದ ಪರಿಸ್ಥಿತಿಯಲ್ಲಿ ಸಿಲುಕಿದ್ದೆ. ಇದರಿಂದ ನನ್ನ ಅರ್ಧ ಜೀವನವೇ ಕಾನೂನು ಹೋರಾಟಗಳಲ್ಲಿ ಕಳೆದುಹೋಯಿತು ಎಂದು ಬೇಸರ ವ್ಯಕ್ತಪಡಿಸಿದರು.

ನೀವು ಏನಾದರೂ ತಪ್ಪು ಮಾಡಿ ಶಿಕ್ಷೆಯಾದರೆ, ಅದಕ್ಕೊಂದು ಅರ್ಥ ಇದೆ. ಮನಸ್ಸಿಗೂ ತಟ್ಟುತ್ತದೆ, ಸಮಾಧಾನ ಆಗುತ್ತೆ. ಆದರೆ, ಯಾವುದೇ ರೀತಿಯ ಕಾರಣ, ಅಪರಾಧ ಮಾಡದೆಯೇ ಶಿಕ್ಷೆಯಾದರೆ ಮನಸ್ಸಿಗೆ ಬಹಳ ನೋವು ಆಗುತ್ತೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎನ್ನುತ್ತಾರೆ ಸಯ್ಯದ್ ಸಾದಿಕ್ ಸಮೀರ್.

ಸರಕಾರಕ್ಕೊಂದು ಮನವಿ

ಶಂಕಿತರ ಉಗ್ರ, ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ(ಯುಎಪಿಎ) ಬಂಧನಕ್ಕೊಳಗಾಗುವ ಪ್ರಕರಣಗಳ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು. ತಪ್ಪಿತಸ್ಥರಿದ್ದರೆ ಕಾನೂನು ರೀತಿಯ ಶಿಕ್ಷೆಯಾಗಲಿ. ಆದರೆ, ಯಾವುದೇ ತಪ್ಪು ಮಾಡಿಲ್ಲವೆಂದು ಸಾಬೀತು ಆದರೆ, ಪೊಲೀಸರನ್ನು ಗುರಿಯಾಗಿಸುವ ಕಾಯ್ದೆಯನ್ನು ಜಾರಿಗೆ ತನ್ನಿ. ಜತೆಗೆ, ನಿರಪರಾಧಿಗಳಿಗೆ ನ್ಯಾಯ ಮತ್ತು ಪರಿಹಾರ ದೊರೆಯುವಂತಾಗಲಿ

-ಸಯ್ಯದ್ ಸಾದಿಕ್ ಸಮೀರ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X