ಬ್ರಹ್ಮಕುಮಾರಿ ಸಂಸ್ಥೆಯ ಮುಖ್ಯಸ್ಥೆ ದಾದಿ ಹೃದಯ ಮೋಹಿನಿ ನಿಧನ

ಫೋಟೊ ಕೃಪೆ: twitter.com
ಜೈಪುರ,ಮಾ.11: ಬ್ರಹ್ಮ ಕುಮಾರಿ ಸಂಸ್ಥೆಯ ಮುಖ್ಯಸ್ಥೆ ದಾದಿ ಹೃದಯ ಮೋಹಿನಿ (93) ಅವರು ಗುರುವಾರ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರು ಅನಾರೋಗ್ಯದಿಂದಾಗಿ ಕಳೆದ 15 ದಿನಗಳಿಂದ ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸಂಸ್ಥೆಯ ಮುಖ್ಯಸ್ಥೆಯಾಗಿದ್ದ ದಾದಿ ಜಾನಕಿ ಕಳೆದ ವರ್ಷ ನಿಧನರಾದ ಬಳಿಕ ಅವರ ಹುದ್ದೆಗೆ ಹೃದಯ ಮೋಹಿನಿ ನೇಮಕಗೊಂಡಿದ್ದರು. ಮಾ.13ರಂದು ಅವರ ಅಂತ್ಯಸಂಸ್ಕಾರ ರಾಜಸ್ಥಾನದ ಅಬು ರೋಡ್ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದರು.
Next Story





