ಮಾಜಿ ಸಚಿವ ಸುರೇಶ್ ಅಂಗಡಿ ತಾಯಿ ನಿಧನ

ಬೆಳಗಾವಿ, ಮಾ.11: ಕೆಂದ್ರದ ಮಾಜಿ ಸಚಿವ ಸುರೇಶ್ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿ (90) ಅವರು ಗುರುವಾರ ಬೆಳಗ್ಗೆ ನಿಧನರಾದರು.
ಇಲ್ಲಿನ ಕೆ.ಕೆ. ಕೊಪ್ಪ ಗ್ರಾಮದವರಾದ ಅವರು ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಸುರೇಶ್ ಅಂಗಡಿ ಅವರು ಕೊರೋನದಿಂದಾಗಿ ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದಾಗ, ವಯೋಸಹಜ ಕಾರಣದಿಂದಾಗಿ ಅಲ್ಲಿಗೆ ಹೋಗಲಾಗದೆ ಸೋಮವ್ವ ಬಹಳ ನೊಂದಿದ್ದರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಅಂತ್ಯಕ್ರಿಯೆ ಸಂಜೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story





