‘ಪರ್ಸೀವರೆನ್ಸ್’ ನಿಂದ ಮಂಗಳ ಗ್ರಹದ ಕಲ್ಲು, ಮಣ್ಣಿನ ಮಾದರಿ ಸಂಗ್ರಹ

ಪೋಟೊ ಕೃಪೆ:twitter.com/CNES
ಪ್ಯಾರಿಸ್ (ಫ್ರಾನ್ಸ್), ಮಾ. 11: ಇತ್ತೀಚೆಗೆ ಮಂಗಳ ಗ್ರಹದ ಅಂಗಳದಲ್ಲಿ ಇಳಿದಿರುವ ಅಮೆರಿಕದ ಮಂಗಳ ಗ್ರಹ ಶೋಧಕ ನೌಕೆ ‘ಪರ್ಸೀವರೆನ್ಸ್’ ಗ್ರಹದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಯೋಜನೆಯ ವಿಜ್ಞಾನಿಗಳು ಬುಧೌವಾರ ಹೇಳಿದ್ದರೆ.
ಕೆಂಪು ಗ್ರಹದಲ್ಲಿ ಪ್ರಾಚೀನ ಕಾಲದಲ್ಲಿ ಜೀವಿಗಳು ಇದ್ದವೇ ಎನ್ನುವುದನ್ನು ಪತ್ತೆಹಚ್ಚುವುದಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಈ ಶೋಧ ನೌಕೆಯನ್ನು ಉಡಾಯಿಸಿದೆ.
ಈ ಮಾದರಿಗಳು ಮಂಗಳ ಗ್ರಹದ ಉಗಮ ಮತ್ತು ರಚನೆಯ ಬಗ್ಗೆ ನಿಖರ ಮಾಹಿತಿಗಳನ್ನು ಒದಗಿಸಲಿದೆ ಎಂದು ಫ್ರಾನ್ಸ್ನ ನ್ಯಾಶನಲ್ ಸೆಂಟರ್ ಫಾರ್ ಸ್ಪೇಸ್ ಸ್ಟಡೀಸ್ (ಸಿಎನ್ಇಎಸ್)ನ ಅಧ್ಯಕ್ಷ ಜೀನ್ ಯವೆಸ್ ಲೆ ಗಾಲ್ ತಿಳಿಸಿದ್ದಾರೆ.
‘‘ ‘ಭೂಮಿಗೆ ಹೊರತಾದ ಗ್ರಹಗಳಲ್ಲಿ ಯಾವತ್ತಾದರೂ ಜೀವಿಗಳಿದ್ದವೇ?’ ಎಂಬ ಮೂಲಭೂತ ಪ್ರಶ್ನೆಗೆ ಕೊನೆಗೂ ಮಂಗಳ ಗ್ರಹದ ಈ ಮಾದರಿಗಳು ಉತ್ತರ ನೀಡಬಹುದಾಗಿದೆ’’ ಎಂದು ಅವರು ಹೇಳಿದ್ದಾರೆ.
ಮಂಗಳ ಗ್ರಹದ ಮಾದರಿಗಳು 2030ರ ದಶಕದಲ್ಲಿ ಭೂಮಿಗೆ ಬರಲಿವೆ.
Next Story





