ಡೆನ್ಮಾರ್ಕ್, ನಾರ್ವೆ, ಐಸ್‌ಲ್ಯಾಂಡ್‌ನಲ್ಲಿ ಆ್ಯಸ್ಟ್ರಝೆನೆಕ ಲಸಿಕೆಗೆ ತಡೆ

ಕೋಪನ್‌ಹೇಗನ್ (ಡೆನ್ಮಾರ್ಕ್), ಮಾ. 11: ಡೆನ್ಮಾರ್ಕ್, ನಾರ್ವೆ ಮತ್ತು ಐಸ್‌ಲ್ಯಾಂಡ್ ದೇಶಗಳು ಗುರುವಾರ ಆ್ಯಸ್ಟ್ರಝೆನೆಕ ಕೊರೋನ ವೈರಸ್ ಲಸಿಕೆಯ ಬಳಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿವೆ. ಈ ಲಸಿಕೆಗಳನ್ನು ತೆಗೆದುಕೊಂಡ ಬಳಿಕ ಕೆಲವರಲ್ಲಿ ರಕ್ತಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಯುರೋಪಿಯನ್ ಆರ್ಥಿಕ ವಲಯದಲ್ಲಿ ಈವರೆಗೆ 30 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದ್ದು, ಮಾರ್ಚ್ 9ರವರೆಗೆ 22 ರಕ್ತ ಹೆಪ್ಪುಗಟ್ಟಿದ ಪ್ರಕರಣಗಳು ವರದಿಯಾಗಿವೆ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜನ್ಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅದೇ ವೇಳೆ, ತನ್ನ ಲಸಿಕೆ ಸುರಕ್ಷಿತವಾಗಿದೆ ಎಂದು ಆ್ಯಸ್ಟ್ರಝೆನೆಕ ಹೇಳಿದೆ.
Next Story