10ನೇ ತರಗತಿ ಮದ್ರಸ ಪರೀಕ್ಷೆ: ಕೋಟೆಕಾರ್ ಮರ್ಕಝುಲ್ ಹಿದಾಯ ಮದ್ರಸಕ್ಕೆ 100 ಶೇ. ಫಲಿತಾಂಶ
ಮಂಗಳೂರು, ಮಾ.12: ಮಳ್ ಹರ್ ಅಕಾಡಮಿ ಅಫ್ ಜನರಲ್ ಎಜ್ಯುಕೇಶನ್ ನಡೆಸುತ್ತಿರುವ ಕೋಟೆಕಾರ್ ಅಜ್ಜಿನಡ್ಕದ ಮರ್ಕಝುಲ್ ಹಿದಾಯ ಮದ್ರಸವು ಇಸ್ಲಾಮಿಕ್ ಎಜುಕೇಶನ್ ಬೋರ್ಡ್ 2021ರ ಜನವರಿಯಲ್ಲಿ ನಡೆಸಿದ 10ನೇ ತರಗತಿಯ ಆಂಗ್ಲ ಮಾಧ್ಯಮ ಪಬ್ಲಿಕ್ ಪರೀಕ್ಷೆಯಲ್ಲಿ 100 ಶೇ. ಫಲಿತಾಂಶ ದಾಖಲಿಸಿದೆ.
ಪರೀಕ್ಷೆ ಬರೆದ 34 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, ಫಾದಿಲ್ ಅಬ್ದುಲ್ ಖಾದಿರ್ (300/300), ಖತೀಜಾ ಶನುಮ್ (299/300), ಖತೀಜಾ ಮುಫೀದಾ (296/300), ಇಬ್ರಾಹೀಂ ಅನಸ್ (294/300) ಹಾಗೂ ಮುಹಮ್ಮದ್ ಮುಅಝ್ (292/300) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





