Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ

ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ

ವಾರ್ತಾಭಾರತಿವಾರ್ತಾಭಾರತಿ12 March 2021 5:30 PM IST
share
ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ

ಮಂಗಳೂರು, ಮಾ.12: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪುರಸ್ಕಾರ ಪ್ರಕಟಿಸಲಾಗಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಕೊಂಕಣಿ ಕವಿ ಅರುಣ್ ಸುಬ್ರಾವ್ ಉಭಯಕರ ಕುಮಟ, ಕಲಾ ಕ್ಷೇತ್ರದಲ್ಲಿ ಪುತ್ತೂರು ಪಾಂಡುರಂಗ ನಾಯಕ್, ಜಾನಪದ ಕ್ಷೇತ್ರದಲ್ಲಿ ಲಕ್ಷ್ಮಿಕೃಷ್ಣ ಸಿದ್ದಿ ಅವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕವನ ವಿಭಾಗದಲ್ಲಿ ಪ್ರೇಮ್ ಮೊರಾಸ್ ಮಂಗಳೂರು ಅವರ ಏಕ್ ಮೂಟ್ ಪಾವ್ಲ್ಯೊಘಿ, ಸಣ್ಣ ಕತೆ ವಿಭಾಗದಲ್ಲಿ ಡೆಸಾ ಮಥಾಯಸ್ ಅವರ ನವಿ ದಿಶಾ, ಲೇಖನ ವಿಭಾಗದಲ್ಲಿ ಸ್ವೀವನ್ ಕ್ವಾಡ್ರಸ್ ಪೆರ್ಮುದೆ ಅವರ ಸುಗಂಧು ಸ್ವಾಸ್ ಪುಸ್ತಕಗಳು ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿವೆ ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಕೆ. ಜಗದೀಶ ಪೈ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೌರವ ಪ್ರಶಸ್ತಿ 50 ಸಾವಿರ ರೂ. ನಗದು, ಪುಸ್ತಕ ಪುರಸ್ಕಾರ 25 ಸಾವಿರ ರೂ. ನಗದು ಒಳಗೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರ ಸಮಯ ಗೊತ್ತುಪಡಿಸಿಕೊಂಡು ಶೀಘ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸ ಲಾಗುವುದು ಎಂದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಾಣೂರು ನರಸಿಂಹ ಕಾಮತ್, ಅರುಣ್ ಜಿ. ಶೇಟ್, ಗೋಪಾಲಕೃಷ್ಣ ಭಟ್, ರಿಜಿಸ್ಟ್ರಾರ್ ಆರ್. ಮನೋಹರ ಕಾಮತ್ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರ ಪರಿಚಯ

ಕೊಂಕಣಿ ಸಾಹಿತ್ಯ: ಅರುಣ್ ಸುಬ್ರಾವ್ ಉಭಯಕರ, ಕುಮಟಾಇವರು ಮುಖ್ಯಾಧ್ಯಾಪಕರಾಗಿ 33 ವರ್ಷಗಳ ಅನುಭವ ಹೊಂದಿದ್ದು, 1989 ರಲ್ಲಿ ಕುಮಟಾದಲ್ಲಿ ಕೊಂಕಣಿ ಪರಿಷತ್ತನ್ನು ಸ್ಥಾಪಿಸಿ, 15 ವರ್ಷ ಸೇವೆ ಸಲ್ಲಿಸಿದ್ದಾರೆ.

ಕೊಂಕಣಿ ಕಲೆ: ಪುತ್ತೂರು ಪಾಂಡುರಂಗ ನಾಯಕ್ ಸಂಗೀತ ಕಲಾವಿದರಾಗಿರುವ ಇವರು ಅಕಾಶವಾಣಿಯ ಬಿ ಶ್ರೇಣಿಯ ಲಾವಿದ. ಆಕಾಶವಾಣಿಯಲ್ಲಿ ಹಲವು ಕೊಂಕಣಿ ಕನ್ನಡ ಭಾವಗೀತೆ,ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. 1988 ರಿಂದ 2020ರವರೆಗೆ ಸುಮಾರು 100-125 ಕನ್ನಡ, ತುಳು, ಕೊಂಕಣಿಯ ಭಕ್ತಿಗೀತೆ, ಭಾವಗೀತೆಗಳನ್ನು ರಚಿಸಿ ಸಂಗೀತ ನೀಡಿರುತ್ತಾರೆ.

ಕೊಂಕಣಿ ಜಾನಪದ: ಲಕ್ಷ್ಮಿಕೃಷ್ಣ ಸಿದ್ದಿಔಪಚಾರಿಕ ಶಿಕ್ಷಣ ಇಲ್ಲದಿದ್ದರೂ ಬಾಲ್ಯದಿಂದಲೂ ಜಾನಪದ ಕಲೆಯಲ್ಲಿ ಆಸಕ್ತಿ ಇಟ್ಟು ಕೊಂಡವರು. ದಮಾಮಿ, ಪುಗಡಿ, ಸಾಂಗ್ಯಾಬಾಳಾ, ಭಜನೆ ಝಾಕೈ ಮುಂತಾದ ಸಿದ್ದಿ ಜಾನಪದ ಕಲೆಯಲ್ಲಿ ಪರಿಣಿತರು. ಇವರು ಕನ್ನಡ ಚಲನಚಿತ್ರದ ನಟಿಯಾಗಿ, ಪಾಪ್ ಗಾಯಕಿಯಾಗಿಯೂ ಉತ್ತಮ ಸಾಧನೆ ಮಾಡಿದ್ದಾರೆ.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ - ಪುಸ್ತಕ ಪುರಸ್ಕಾರ-2020ಕೊಂಕಣಿ ಕವನ  - ಏಕ್ ಮೂಟ್ ಪಾವ್ಲ್ಯೊ80 ಪುಟಗಳ ಈ ಕವನ ಸಂಗ್ರಹದಲ್ಲಿ ಅಮೆರಿಕದಲ್ಲಿ ಕಪತ್ಪು ಜನಾಂಗದವರಿಗೆ ಬಿಳಿಯರೊಂದಿಗೆ ಹೇಗೆ ಜೀವಿಸುವುದೆಂಬ ಪರಿಸ್ಥಿತಿಯ ಬಗ್ಗೆ, ಕೊಂಕಣಿ ಭಾಷೆಗಾಗಿ ಜೀವ ತೆಯ್ದೆ ಜನರ ಬಗ್ಗೆ, ಹಾಗೂ ಮಕ್ಕಳಿಗೆ ಅವರವರ ಬುದ್ದಿಮತ್ತೆಗೆ ಸಂಬಂಧಿಸಿದ ಹಾಸ್ಯ ಕವಿತೆಗಳನ್ನು ಹೊಂದಿರುತ್ತದೆ.ಈ ಪುಸ್ತಕದ ಲೇಖಕರಾದ ಪ್ರೇಮ್ ಮೊರಾಸ್, ಮಂಗಳೂರು ಇವರು ಎಂ.ಎ ಪದವಿಧರಾಗಿದ್ದು ಮಂಗಳೂರು ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನ ಕೊಂಕಣಿ  ಎಂ.ಎ. ಉಪನ್ಯಾಸಕರಾಗಿರುತ್ತಾರೆ.

ಕೊಂಕಣಿ ಸಣ್ಣಕತೆಗಳು: ನವಿ ದಿಶಾಈ ಸಣ್ಣಕತೆಯಲ್ಲಿ ಒಟ್ಟು 18 ಕತೆಗಳು ಹೊಂದಿದ್ದು, ಸೀ ಸಂವೇದನೆ, ಮನುಷ್ಯ ಬಾಂಧವ್ಯ, ಜೀವನದ ಸಂಘರ್ಷ ಮತ್ತು ವೌಲ್ಯಗಳನ್ನು ತಿಳಿಸುವಂತಹ ವಿಚಾರಗಳು, ಈ ಕತೆಗಳಲ್ಲಿ ಕಂಡುಬರುತ್ತದೆ.

ಈ ಪುಸ್ತಕದ ಲೇಖಕಿ ಡೆಸಾ ಮಥಾಯಸ್. ಇವರು ಮೊನಿಕಾ ಶಾಂತಿಪುರ ಎಂಬ ಹೆಸರಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿದ್ದು, ಉಡುಪಿಯ ಪಾಂಬುರು ನಿವಾಸಿಯಾಗಿರುತ್ತಾರೆ. ಈಗ ಇವರು ತಮ್ಮ ಕುಟುಂಬದೊಂದಿಗೆ ಅಯರ್ ಲೆಂಡಿನ ಡಬ್ಲಿನ್ ಎಂಬಲ್ಲಿ ವಾಸವಾಗಿರುತ್ತಾರೆ.

ಕೊಂಕಣಿ ಲೇಖನ: ಸುಗಂಧು ಸ್ವಾಸ್ ಇವರ ಈ ಲೇಖನ ಸಂಗ್ರಹದಲ್ಲಿ ಆಸಕ್ತಿದಾಯಕ ಹಾಗೂ ಮಾನವೀಯ ಅಭಿರುಚಿಯ ಒಟ್ಟು 23 ಲೇಖನಗಳಿವೆ.ಈ ಪುಸ್ತಕದ ಲೇಖಕರಾದ ಸ್ಟೀವನ್ ಕ್ವಾಡ್ರಸ್ ಪೆರ್ಮುದೆ, ಇವರು ಸುಮಾರು 35 ವರ್ಷಗಳಿಂದ ಕೊಂಕಣಿ, ಕನ್ನಡ, ಇಂಗ್ಲಿಷ್ ಸಾಹಿತ್ಯದಲ್ಲಿ ನಿರಂತರ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X