ಉಡುಪಿ: ಎನ್‌ಸಿಸಿಯಿಂದ ಧ್ವಜ ವಂದನೆ
ಉಡುಪಿ, ಮಾ.12: ಸ್ವಾತಂತ್ರೋತ್ತರ ಭಾರತದ ಪ್ರಜೆಗಳಾದ ನಮಗೆ ಸ್ವಾತಂತ್ರ ಸಿದ್ಧಿಗಾಗಿ ನಮ್ಮ ಹಿರಿಯರು ಮಾಡಿದ ತ್ಯಾಗ ಮತ್ತು ಬಲಿದಾನದ ಸ್ಮರಣೆ ಸದಾ ಇರಬೇಕು. ಹಲವರ ತ್ಯಾಗದ ಫಲವಾದ ಈ ಸ್ವಾತಂತ್ರವು ಸ್ವೇಚ್ಛೆಯಾಗದ ರೀತಿಯಲ್ಲಿ ನಾವು ಜಾಗರೂಕತೆ ವಹಿಸಬೇಕು. ಸ್ವಚ್ಛ- ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು ಎಂದು ಮೆ. ಪ್ರಕಾಶ್ ರಾವ್ ಅವರು ಎನ್‌ಸಿಸಿ ಕೆಡೆಟ್‌ಗಳಿಗೆ ಕರೆ ನೀಡಿದ್ದಾರೆ.
21ನೇ ಕರ್ನಾಟಕ ಬೆಟಾಲಿಯನ್ ವತಿಯಿಂದ ವಿಜಯ ದಿವಸದ ಅಂಗವಾಗಿ ಅಜ್ಜರಕಾಡಿನ ಯುದ್ದ ಸ್ಮಾರಕದಲ್ಲಿ ನಡೆದ ಈ ಧ್ವಜವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಈ ಧ್ವಜವಂದನೆ ಕಾರ್ಯಕ್ರಮದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜು ಮತ್ತು ಉಡುಪಿ ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Next Story





