ಪೊಲೀಸ್ ವಿಚಾರಣೆ ಹೆಸರಿನಲ್ಲಿ ಅಮಾಯಕರಿಗೆ ತೊಂದರೆ ನೀಡದಂತೆ ಆಗ್ರಹಿಸಿ ಎಸ್ಪಿಗೆ ಮನವಿ

ಉಡುಪಿ, ಮಾ.12: ಬಾರಕೂರಿನ ಶಂಕರ ಶಾಂತಿ ಪ್ರಕರಣಕ್ಕೆ ಸಂಬಂಧಿಸಿ ವಿಶ್ವಕರ್ಮ ಸಮಾಜದ ಅಮಾಯಕರಿಗೆ ವಿಚಾರಣೆ ಹೆಸರಿನಲ್ಲಿ ತೊಂದರೆ ನೀಡಬಾರದೆಂದು ಆಗ್ರಹಿಸಿ ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ನೇತೃತ್ವದ ನಿಯೋಗ ಶುಕ್ರವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಅವರಿಗೆ ಮನವಿ ಸಲ್ಲಿಸಿತು.
ಫೆ.20ರಂದು ಅಹಿತಕರ ಘಟನೆಯು ಬಾರಕೂರು ಕಚ್ಚೂರು ರಸ್ತೆಯ ಬದಿ ಯಲ್ಲಿ ನಡೆದಿದ್ದು, ಇದಕ್ಕೂ ದೇವಸ್ಥಾನಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ. ಆ ದಿನ ಶಂಕರ್ ಶಾಂತಿ, ಬ್ಯಾನರ್‌ಗಳ ಫ್ರೇಮ್‌ಗಳನ್ನು ಕೂಡಿ ಇಡುತ್ತಿದ್ದ ದೇವಸ್ಥಾನದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ, ದೇವಸ್ಥಾನದ ಸಭಾಂಗಣದ ಕಿಟಕಿ ಗಾಜುಗಳನ್ನು ಒಡೆದು, ಅವರೊಳಗೆ ಸಂಘರ್ಷ ನಡೆದಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಎರಡೂ ಕಡೆಯವರಿಂದ ಪ್ರಕರಣ ದಾಖಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿ ಅಮಾಯಕರ ಮೇಲೂ ಕೂಡ ಪ್ರಕರಣ ದಾಖ ಲಿಸುವ ಹುನ್ನಾರ ನಡೆಯುತ್ತಿದೆ. ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಕಾರ್ಯ ಕ್ರಮಕ್ಕೆ 400ರಿಂದ 500ಮಂದಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿಯ ಪ್ರತಿಯೊಬ್ಬ ಸದಸ್ಯರ ಮೊಬೈಲ್ ಸಂಖ್ಯೆಯನ್ನು ಹಾಗೂ ವಿವರ ಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಅದರಂತೆ ಬ್ರಹ್ಮಾವರ ಠಾಣೆಯಿಂದ ಈ ಮೊಬೈಲ್‌ಗಳಿಗೆ ದೂರವಾಣಿ ಕರೆಗಳು ಬರುತ್ತಿವೆ. ಇದರಲ್ಲಿ ಹೆಚ್ಚಿನವರು ಈ ಘಟನೆಗೆ ಸಂಬಂಧಪಡದವಾಗಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಈ ವಿಚಾರಣೆಯಿಂದ ಅಮಾಯಕರು ಭಯಭೀತರಾಗಿದ್ದಾರೆ. ಅನಾವಶ್ಯಕ ಕಾರಣಗಳಿಗೆ ವಿಶ್ವಕರ್ಮ ಸಮಾಜ ಬಾಂಧವರನ್ನು ವಿಚಾರಣೆ ಮಾಡಬಾರದು. ಇದನ್ನು ಸಮಾಜ ಗಂಭೀರವಾಗಿ ಪರಿಗಣಿಸಿದ್ದು, ಸಮಾಜದ ಅಮಾಯಕರಿಗೆ ಯಾವುದೇ ತೊಂದರೆ ಆಗಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ಎಸ್ಪಿ, ಈ ಘಟನೆಯಲ್ಲಿ ಭಾಗಿಯಾಗದ ಅಮಾಯಕ ರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾ ಗುವುದು ಎಂದು ಭರವಸೆ ನೀಡಿದರು. ನಿಯೋಗದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಆಚಾರ್ಯ ವಡೇರಹೋಬಳಿ, ಜಿಲ್ಲಾ ವಿಶ್ವಕರ್ಮ ಕಾರ್ಮಿಕ ಸಂಘಟನೆಯ ಗೌರವಾಧ್ಯಕ್ಷ ಸುಧಾಕರ ಆಚಾರ್ಯ, ಉಪ್ರಳ್ಳಿ ಶ್ರೀಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ, ಮುಖಂಡರಾದ ಬಿ.ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ರವೀಂದ್ರ ಆಚಾರ್ಯ ಅರೆಹೊಳೆ, ಜಯಕರ ಆಚಾರ್ಯ, ಕಿಶೋರ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸ್ ಇಲಾಖೆಯು ಈ ಪ್ರಕರಣದಲ್ಲಿ ಅಮಾಯಕರನ್ನು ಪೀಡಿಸುವ ಕಾರ್ಯ ಮುಂದುವರೆಸಿದ್ದಲ್ಲಿ ಅವರ ಪೋಷಕರು, ಸಮಾಜ ಬಾಂಧವರು ಹಾಗೂ ಇತರರನ್ನು ಸೇರಿಸಿಕೊಂಡು ಬ್ರಹ್ಮಾವರ ಬೃಹತ್ ಪ್ರತಿಭಟನೆ ನಡೆಸ ಲಾಗುವುದು ಎಂದು ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಆಚಾರ್ಯ ತಿಳಿಸಿದ್ದಾರೆ.







