ಮಾ.13ರಿಂದ ಹೂಡೆಯಲ್ಲಿ ಉರೂಸ್
ಉಡುಪಿ, ಮಾ.12: ಹೂಡೆ ಜದೀದ್ ಮಸೀದಿ ಬಳಿಯ ಹಝ್ರತ್ ಶೇಖ್ ಸಾದಿರ್ ವಲಿಯಲ್ಲಾಹ್ (ರಅ) ದರ್ಗಾದಲ್ಲಿ ಉರೂಸ್ ಸಮಾರಂಭ ಮಾ.13ರಿಂದ 15ರವರೆಗೆ ಜರಗಲಿದೆ.
ಮಾ.13ರಂದು ರಾತ್ರಿ 8ಗಂಟೆಗೆ ಮೌಲಾನ ಮುಹಮ್ಮದ್ ನಕ್ಸ್ ಬಂದಿ ಧಾರ್ಮಿಕ ಪ್ರವಚನ ನೀಡಲಿರುವರು. ಮಾ.14ರಂದು ಮಧ್ಯಾಹ್ನ 3 ಗಂಟೆಗೆ ಸಂದಲ್ ಮೆರವಣಿಗೆ, ರಾತ್ರಿ 9ಗಂಟೆಗೆ ಚಿಸ್ತಿಯ ಸ್ವಲಾತ್ ಕಾರ್ಯಕ್ರಮ, ಮಾ.15ರಂದು ರಾತ್ರಿ 9ಗಂಟೆಗೆ ಏರ್ವಾಡಿ ಮಜ್ಲಿಸ್ ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





