ಬಂಜಾರ ಸಮಾಜದ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮ

ಮಂಗಳೂರು, ಮಾ.12: ಕರಾವಳಿ ಶೀ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘ (ರಿ)ದ ವತಿಯಿಂದ ಬಂಜಾರ ಬಾಂಧವ್ಯ ದೊಂದಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ಇತ್ತೀಚೆಗೆ ನಗರದಲ್ಲಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಿ. ವೇದವ್ಯಾಸ್ ಕಾಮತ್ ‘ಗುಳೆ ಹೊತ್ತು ಬಂದು ಕರಾವಳಿಯಲ್ಲಿ ನೆಲೆಸಿರುವ ಲಂಬಾಣಿ ಜನಾಂಗದವರಿಗೆ ವಾಸ್ತವ್ಯದ ಅವಶ್ಯಕತೆ ಇದೆ. ಅಲ್ಲದೆ ನಗರದಲ್ಲಿ ಬಂಜಾರ ಸಮುದಾಯ ಭವನ ನಿರ್ಮಿಸಲು ಶ್ರಮಿಸುವುದಾಗಿ ತಿಳಿಸಿದರು.
ಕರಾವಳಿ ಶ್ರೀ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘದ ಅಧ್ಯಕ್ಷ ಡಾ.ಎ.ಟಿ. ರಾಮಚಂದ್ರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ನೌಕರರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಬಿ.ಆರ್.ಹರೀಶ್ ನಾಯ್ಕ, ಶಿವಮೊಗ್ಗದ ಬಂಜಾರ ವಿದ್ಯಾರ್ಥಿ ಸಮಿತಿಯ ರಾಜ್ಯಾಧ್ಯಕ್ಷ ಡಿ.ಆರ್. ಗಿರೀಶ್ ಮಾತನಾಡಿದರು.
ತೀರ್ಥಹಳ್ಳಿಯ ಐ.ಟಿ.ಐ. ಕಾಲೇಜಿನ ಪ್ರಾಚಾರ್ಯ ಕಾಳಿದಾಸ ನಾಯ್ಕ ಬಂಜಾರ ಜನಾಂಗದ ಧಾರ್ಮಿಕ ಸಂಸ್ಕೃೃತಿಯ ಬಗ್ಗೆ ಉಪನ್ಯಾಸ ನೀಡಿದರು.
ಬಂಜಾರ ಬಾಂಧವ್ಯದೊಂದಿಗೆ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕೊರೋನ ಸಂದರ್ಭ ಸೇವೆ ಸಲ್ಲಿಸಿದ ಬಂಜಾರರಿಗೆ ಸನ್ಮಾನಿಸಲಾಯಿತು.
ಕರಾವಳಿ ಶ್ರೀಸೇವಾಲಾಲ್ ಬಂಜಾರ (ಲಂಬಾಣಿ) ಸಂಘದ ಮಾಜಿ ಅಧ್ಯಕ್ಷ ಜಯಪ್ಪಲಮಾಣಿ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರು ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ರಮೇಶ್ ಪಿ. ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಪ್ರದೀಪ್ ಡಿ. ವಂದಿಸಿದರು. ಡಾ. ಗೀತಾ ನಾಯ್ಕ ಪ್ರಾರ್ಥಿಸಿದರು.







