ನನಗೆ ವಧು ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ 2 ಅಡಿ ಎತ್ತರದ ವ್ಯಕ್ತಿ!

ಅಝೀಮ್ (Photo: facebook)
ಮುಝಫ್ಫರ್ ನಗರ: ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಪೊಲೀಸರು ಎರಡು ಅಡಿ ಎತ್ತರದ ವ್ಯಕ್ತಿಗೆ ವಧು ಹುಡುಕಿಕೊಡಬೇಕೆಂಬ ಅಸಾಮಾನ್ಯ ಕೋರಿಕೆಯೊಂದು ಸ್ವೀಕರಿಸಿದ್ದಾರೆ.
26ರ ವಯಸ್ಸಿನ ಅಝೀಮ್ ಮಂಗಳವಾರ ಶಾಮ್ಲಿಯ ಪೊಲೀಸ್ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ತನ್ನ ಕುಟುಂಬ ಸದಸ್ಯರು ನನಗೆ ಮದುವೆ ಮಾಡುತ್ತಿಲ್ಲ. ನೀವೇ ನನಗೆ ಹೊಂದಿಕೆಯಾಗುವ ವಧುವನ್ನು ಹುಡುಕಿಕೊಡಿ ಎಂದು ವಿನಂತಿಸಿದ್ದಾರೆ. ಆದರೆ, ಅಝೀಮ್ ಅವರ ಪ್ರಯತ್ನ ಯಶಸ್ಸಾಗಲಿಲ್ಲ.
ಜನರಿಗೆ ಮದುವೆ ವ್ಯವಸ್ಥೆ ಮಾಡುವುದು ಪೊಲೀಸರ ಕೆಲಸವಲ್ಲ. ದಂಪತಿಗಳ ಮಧ್ಯೆ ವಿವಾದವಿದ್ದರೆ ಅದನ್ನು ಬಗೆಹರಿಸಲು ಸಹಾಯ ಮಾಡುತ್ತೇವೆ ಎಂದು ಪೊಲೀಸ್ ಠಾಣೆಯ ಸ್ಟೇಶನ್ ಹೌಸ್ ಅಧಿಕಾರಿ ನೀರಜ್ ಚೌಧರಿ ಹೇಳಿದ್ದಾರೆ.
ಅಝೀಮ್ ಕುಟುಂಬ ಕೈರಾನದಲ್ಲಿ ವಾಸವಾಗಿದೆ.
ನಾವು ಅಝೀಝ್ ಗೆ ಮದುವೆ ಮಾಡಲು ಬಯಸಿದ್ಧೇವೆ. ಯಾರಾದರೂ ಆತನನ್ನು ಮದುವೆಯಾಗಲು ಮುಂದೆ ಬರಬೇಕಾಗಿದೆ. ಅಝೀಝ್ ನನ್ನು ಚೆನ್ನಾಗಿ ನೋಡಿಕೊಳ್ಳುವ ಹುಡುಗಿಗೆ ಮದುವೆ ಮಾಡಿಕೊಡಲು ಇಚ್ಛಿಸಿದ್ದೇವೆ ಎಂದು ಅಝೀಝ್ ಸಹೋದರ ಮುಹಮ್ಮದ್ ನಯೀಮ್ ಹೇಳಿದ್ದಾರೆ.





