ಹರೇಕಳ ಧಾರ್ಮಿಕ ಪ್ರಭಾಷಣ, ಮದರಸ ವಿದ್ಯಾರ್ಥಿಗಳ ಪ್ರತಿಭಾ ಸಂಗಮ
ಕೊಣಾಜೆ: ತಮ್ಮಲ್ಲಿ ಬೇಕಾದಷ್ಟು ಸಂಪತ್ತು ಇದ್ದರೂ ಅದನ್ನು ಸಮಾಜ, ಧಾರ್ಮಿಕ ಕೆಲಸಕ್ಕೆ ವ್ಯಯಿಸುವವರು ವಿರಳ, ಉತ್ತಮ ದಾರಿಯಲ್ಲಿ ಸಂಪತ್ತು ವ್ಯಯಿಸುವುದು ದೇವನು ಮೆಚ್ಚುವ ಕಾರ್ಯ ಎಂದು ಉಳ್ಳಾಲ ಖಾಝಿ ಅಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅಭಿಪ್ರಾಯಪಟ್ಟರು.
ಹರೇಕಳ ಆಲಡ್ಕ ಬದ್ರಿಯಾ ಜುಮಾ ಮಸೀದಿ ಆಶ್ರಯದಲ್ಲಿ ಶುಕ್ರವಾರ ತ್ರಿದಿನ ಧಾರ್ಮಿಕ ಪ್ರಭಾಷಣ, ಮದರಸ ವಿದ್ಯಾರ್ಥಿಗಳ ಪ್ರತಿಭಾ ಸಂಗಮದ ಸಮಾಪನಾ ಸಮಾರಂಭದಲ್ಲಿ ಮಾತನಾಡಿದರು.
ಇಹಲೋಕದಲ್ಲಿ ಬಡತನಕ್ಕೆ ಅಂಜದೆ, ಸಿರಿತನಕ್ಕೆ ಅಹಂಕಾರ ಪಡದೆ ಜೀವನ ಸಾಗಿಸಬೇಕಿದೆ. ಹಣ, ಸಂಪತ್ತು ದೇವನ ದಯೆ ಯಾಗಿರುವುದರಿಂದ ತಮ್ಮಲ್ಲಿರುವ ಹಣ ಜೋಪಾಡವಾಗಿಡದೆ ಧಾರ್ಮಿಕವಾಗಿಯೂ, ಸಮಾಜದಲ್ಲಿರುವ ಕಟ್ಟಕಡೇಯ ಜನರ ಅನುಕೂಲಕ್ಕೆ ಬಳಸಬೇಕು. ಹಿಂದೆ ಕಾಲರದಂತಹ ಮಾರಕ ಕಾಯಿಲೆ ಬಂದಾಗಲೂ ಜನರು ದೇವನಿಗೆ ಮೊರೆ ಹೋದಂತೆ, ಕರೋನ ನಿರ್ಮೂಲನೆಗೂ ಪ್ರಾರ್ಥನೆಯೊಂದೇ ಮಾರ್ಗ ಎಂದು ಹೇಳಿದರು. ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಪಂಜಿಮಾಡಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಯು.ಟಿ.ಖಾದರ್, ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ನ್ಯೂಪಡ್ಪು ಮಸೀದಿ ಅಧ್ಯಕ್ಷ ಬಿ.ಖಾಲಿದ್, ಗ್ರಾಮ ಪಂ. ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ, ಸದಸ್ಯರಾದ ಮುಹಮ್ಮದ್ ಅಶ್ರಫ್, ರಫೀಕ್, ಅಬ್ದುಲ್ ಹಮೀದ್ ಸುಭಾಷ್ ನಗರ, ಮಸೀದಿಯ ಮಾಜಿ ಅಧ್ಯಕ್ಷರಾದ ಉಮರಬ್ಬ ಕೆ., ಅಬ್ದುಲ್ ರಝಾಕ್ ಆಲಡ್ಕ, ಹಸನಬ್ಬ ಜಿ.ಎಚ್.ಗಾಣದಬೆಟ್ಟು, ಮಸೀದಿಯ ಉಪಾಧ್ಯಕ್ಷ ರಫೀಕ್ ಹರೇಕಳ, ಹುಸೈನ್ ಟೈಲರ್ ಕಡವಿನಬಳಿ, ಸಂಶುದ್ದೀನ್ ಕೊಜಪಾಡಿ, ಅಹ್ಮದ್ ಆಲಡ್ಕ, ಎಚ್.ಎ.ಅಬ್ದುಲ್ ಖಾದರ್ ನಾಟೆಕಲ್, ಅಬ್ದುಲ್ ಮಜೀದ್ ಎಂ.ಪಿ. ಆಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ಖತೀಬ್ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ ಸ್ವಾಗತಿಸಿದರು. ಅಶ್ರಫ್ ಮುಸ್ಲಿಯಾರ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಮುಹಮ್ಮದ್ ಫಯಾಝ್ ವಂದಿಸಿದರು.







