ಟೂಲ್‌ಕಿಟ್ ಪ್ರಕರಣ: ಮಾರ್ಚ್ 15ರವರೆಗೆ ಶುಭಂಕರ್ ಚೌಧರಿಗೆ ಬಂಧನದಿಂದ ರಕ್ಷಣೆ
ಹೊಸದಿಲ್ಲಿ, ಮಾ.12: ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಗೆ ಬೆಂಬಲ ಕ್ರೋಢೀಕರಿಸುವ ಹಿನ್ನೆಲೆಯಲ್ಲಿ ರಚಿಸಲಾದ ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯ ನ್ಯಾಯಾಲಯ ಶುಕ್ರವಾರ ಗೋವಾ ಮೂಲದ ಕಾರ್ಯಕರ್ತ ಶುಭಂಕರ್ ಚೌಧರಿಗೆ ಮಾರ್ಚ್ 15ರವರೆಗೆ ಬಂಧನದಿಂದ ರಕ್ಷಣೆ ಮಂಜೂರುಗೊಳಿಸಿದೆ.
ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಮಾರ್ಚ್ 3ರಂದು ನೀಡಿದ್ದ 10 ದಿನಗಳ ನಿರೀಕ್ಷಣಾ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಚೌಧರಿ ಪಾಟಿಯಾಲ ಹೌಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಂಧನದಿಂದ ಮಧ್ಯಾಂತರ ರಕ್ಷಣೆಯನ್ನು ಮುಂದುವರಿಸಲು ತಮ್ಮ ಆಕ್ಷೇಪವಿಲ್ಲ ಎಂದು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಬಂಧನದಿಂದ ರಕ್ಷಣೆ ಒದಗಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಮಾರ್ಚ್ 15ಕ್ಕೆ ನಿಗದಿಗೊಳಿಸಿದೆ. ಸಹ ಆರೋಪಿಗಳಾದ ದಿಶಾ ರವಿ ಮತ್ತು ಶಂತನು ಮುಲುಕ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯೂ ಮಾರ್ಚ್ 15ರಂದು ನಿಗದಿಯಾಗಿದೆ.
Next Story





