ಮಾ.14ರವರೆಗೆ ಹರ್ಷದಲ್ಲಿ ಹರ್ಷೋತ್ಸವ ಸಂಭ್ರಮ
ಮಂಗಳೂರು : ಗೃಹೋಪಕರಣಗಳ ಮಾರಾಟ ಮತ್ತು ಸೇವೆಗೆ ಹೆಸರಾಗಿರುವ ‘ಹರ್ಷ’ ಮಳಿಗೆಗಳಲ್ಲಿ ‘ಹರ್ಷೋತ್ಸವ’ ಶಾಪಿಂಗ್ ಸಂಭ್ರಮಾಚರಣೆಯು ಮಾ.14ರವರೆಗೆ ನಡೆಯಲಿದೆ.
‘ಹರ್ಷ’ದ ವಾರ್ಷಿಕಾಚರಣೆಯ ಪ್ರಯುಕ್ತ ಪ್ರತೀ ವರ್ಷ ‘ಹರ್ಷೋತ್ಸವ’ವು ಯಶಸ್ವಿಯಾಗಿ ನಡೆಯುತ್ತಿದ್ದು, ಭಾರೀ ಜನಮನ್ನಣೆ ಗಳಿಸುತ್ತಿದೆ. ಹಾಗಾಗಿ ಈ ಬಾರಿ ಏಳು ದಿನಗಳ ಬದಲಾಗಿ ಒಂಭತ್ತು ದಿನಗಳ ಕಾಲ ನಡೆಸಲು ಸಂಸ್ಥೆ ಉದ್ದೇಶಿಸಿತ್ತು. ಈಗಾಗಲೆ ಒಂದು ವಾರ ಹರ್ಷೋತ್ಸವ ಯಶಸ್ವಿಯಾಗಿ ನಡೆದಿದ್ದು, ಇನ್ನು ಕೇವಲ ಎರಡು ದಿನ ಮಾತ್ರ ಹರ್ಷೋತ್ಸವ ನಡೆಯಲಿದೆ. ಹಾಗಾಗಿ ಉಳಿದ ಈ ಎರಡು ದಿನದಲ್ಲಿ ಗ್ರಾಹಕರು ‘ಹರ್ಷ’ದ ಮಳಿಗೆಗೆ ಆಗಮಿಸಿ ತಮಗೆ ಪ್ರಿಯವಾದ ವಸ್ತುಗಳ ಶಾಪಿಂಗ್ ಮಾಡಬಹುದಾಗಿದೆ.
ಉಡುಪಿಯ ಎರಡು, ಮಂಗಳೂರಿನ ಎರಡು, ಬ್ರಹ್ಮಾವರ, ಸುರತ್ಕಲ್, ಪುತ್ತೂರು, ಕುಂದಾಪುರ ಹಾಗೂ ಶಿವಮೊಗ್ಗದ ಹರ್ಷ ಮಳಿಗೆಗಳಲ್ಲಿ ನಡೆಯುತ್ತಿರುವ ಹರ್ಷೋತ್ಸವದಲ್ಲಿ ಜಗತ್ಪ್ರಸಿದ್ಧ ಬ್ರ್ಯಾಂಡ್‌ಗಳಾದ ಗೋದ್ರೇಜ್, ಒನಿಡಾ, ವೋಲ್ಟಾಸ್, ಐಎಫ್‌ಬಿ, ವರ್ಲ್‌ಪೂಲ್, ಸೋನಿ, ಪ್ಯಾನಸೋನಿಕ್, ಎಲ್‌ಜಿ, ಸ್ಯಾಮ್‌ಸಂಗ್, ಬೋಶ್, ಹೈಯರ್, ಲೀಭೇರ್, ಬ್ಲೂಸ್ಟಾರ್, ಆ್ಯಪಲ್, ಎಚ್‌ಪಿ, ನಿಕಾನ್, ಪ್ರೆಸ್ಟೀಜ್, ಉಷಾ ಮೊದಲಾದ ಕಂಪೆನಿಗಳ ಅತ್ಯಾಧುನಿಕ ಗೃಹೋಪಕರಣಗಳು ವಿಶಾಲ ಶ್ರೇಣಿಯಲ್ಲಿ ಒಂದೇ ಸೂರಿನಡಿಯಲ್ಲಿ ಆಯ್ಕೆ ಮಾಡುವ ಅವಕಾಶ ಗ್ರಾಹಕರದ್ದಾಗಲಿದೆ. ಇವುಗಳು ರಿಯಾಯಿತಿ ದರಗಳಲ್ಲಿ ಅತ್ಯುತ್ತಮ ದರಗಳಲ್ಲಿ ಲಾಭದಾಯಕ ಕೊಡುಗೆಗಳೊಂದಿಗೆ ಗ್ರಾಹಕರಿಗೆ ಲಭಿಸುವುದು ‘ಹರ್ಷ’ದ ವಿಶೇಷತೆಯಾಗಿದೆ.
‘ಹರ್ಷೋತ್ಸವ’ದಲ್ಲಿ ಆಕರ್ಷಕ ವಿನಿಮಯ ಕೊಡುಗೆಗಳು, ವಿಶಿಷ್ಟ ಕಾಂಬಿ ಕೊಡುಗೆಗಳು, ವಿಶೇಷ ರಿಯಾಯಿತಿಗಳು, ಖಚಿತ ಉಡುಗೊರೆಗಳು ಸಿಗಲಿದೆ. ಜೊತೆಗೆ ಹರ್ಷೋತ್ಸವದ ಕೇಂದ್ರಬಿಂದು ಲಕ್ಕಿಡ್ರಾ, ಖರೀದಿಯ ನಂತರ ಸ್ಥಳದಲ್ಲೇ ನಡೆಯುವ ಲಕ್ಕಿಡ್ರಾದಲ್ಲಿ ತಕ್ಷಣವೇ ಸ್ಮಾರ್ಟ್ ಎಲ್‌ಇಡಿ ಟಿವಿ, ಸ್ಪ್ಲಿಟ್ ಎಸಿ, ಸ್ಮಾರ್ಟ್‌ಫೋನ್, ಮೈಕ್ರೋವೇವ್ ಓವನ್, ಮಿಕ್ಸರ್ ಗ್ರೈಂಡರ್, ಪ್ರೆಶರ್ ಕುಕ್ಕರ್ ಸಹಿತ 12 ಸಾವಿರಕ್ಕೂ ಹೆಚ್ಚು ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಗ್ರಾಹಕರದ್ದಾಗಲಿದೆ.
ನವನವೀನ ಮಾದರಿಯ ಡಿಜಿಟಲ್ ತಂತ್ರಜ್ಞಾನದ ಎಲ್‌ಇಡಿ ಟಿವಿಗಳು, ಫ್ರಾಸ್ಟ್ ಪ್ರೀ ರೆಫ್ರಿಜರೇಟರ್‌ಗಳು ಫುಲ್ಲೀ ಅಟೊಮೆಟಿಕ್ ವಾಷಿಂಗ್ ಮೆಶಿನ್‌ಗಳು, ಕೈಗೆಟಕುವ ದರದಲ್ಲಿ ಉನ್ನತ ತಂತ್ರಜ್ಞಾನದ ವಿದ್ಯುತ್ ಉಳಿಸುವ ಸ್ಟಾರ್ ರೇಟೆಡ್ ಸ್ಪ್ಲಿಟ್ ಎ.ಸಿ.ಗಳು, ಮೈಕ್ರೋವೇವ್ ಓವನ್‌ಗಳು, ಜಗತ್ಪ್ರಸಿದ್ಧ ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್‌ಗಳು, ನವ-ನವೀನ ಮಾದರಿಯ ಮಿಕ್ಸರ್, ಗ್ರೈಂಡರ್, ಫ್ಯಾನ್, ಕೂಲರ್ಸ್‌ಗಳು, ಅತ್ಯಾಧುನಿಕ ಪರ್ಸನಲ್, ಹೆಲ್ತ್‌ಕೇರ್ ಹಾಗೂ ಬ್ಯೂಟಿಕೇರ್ ಉತ್ಪನ್ನಗಳು, ಜೊತೆಗೆ ಇನ್ನಿತರ ಗೃಹೋಪಯೋಗಿ ಸಾಮಗ್ರಿ ಗಳು ಹಲವಾರು ಕೊಡುಗೆಗಳೊಂದಿಗೆ ಗ್ರಾಹಕರ ಮನಸೆಳೆಯಲಿವೆ.







