ಸ್ಕೂಟರ್ ಢಿಕ್ಕಿ: ಪಾದಚಾರಿ ಮೃತ್ಯು
ಮಂಗಳೂರು, ಮಾ. 12: ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರು ಮೃತಪಟ್ಟ ಘಟನೆ ನಗರದ ಬಿಕರ್ನಕಟ್ಟೆ ಬಳಿ ಗುರುವಾರ ನಡೆದಿದೆ.
ಫೆಡ್ರಿಕ್ ಡಿ’ಸೋಜ(84) ಬವರು ಗುರುವಾರ ಬಿಕರ್ನಕಟ್ಟೆಯ ಮೆಡಿಕಲ್‌ವೊಂದರಿಂದ ಔಷಧ ಖರೀದಿಸಲು ತನ್ನ ಮನೆಯಿಂದ ನಡೆದುಕೊಂಡು ಹೋಗುತ್ತಾಾ ಬಿಕರ್ನಕಟ್ಟೆಯ ಶ್ರೀ ಕ್ಷೇತ್ರ ಬಲಮುರಿ ಸಿದ್ದಿವಿನಾಯಕ ದೇವಸ್ಥಾಾನದ ದ್ವಾರದ ಎದುರು ರಸ್ತೆ ದಾಟುತ್ತಿದ್ದಾಗ ಬಿಕರ್ನಕಟ್ಟೆ ಜಂಕ್ಷನ್ ಕಡೆಯಿಂದ ಬಂದ ಸ್ಕೂಟರ್ ಢಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಫೆಡ್ರಿಕ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಕೂಟರ್ ಸವಾರನ ಅಜಾಗರೂಕತೆಯ ಚಾಲನೆ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





