ಪ್ರಜ್ಞಾವಂತ ಯುವ ಸಮುದಾಯದಿಂದ ದೇಶದ ಭವಿಷ್ಯ ನಿರ್ಧಾರ : ರಮಾನಾಥ ರೈ
ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು, ಮಾ.13: ನಗರದ ಬೆಂದೂರ್ ವೆಲ್ ನ ಸೈಂಟ್ ಸೆಬಾಸ್ಟಿನ್ ಸಭಾಂಗಣದಲ್ಲಿ ಹಮ್ಮಿಕೊಂಡ ಮಂಗಳೂರು ವಿ.ವಿ.ಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಪ್ರಪಂಚದ ವಿವಿಧ ದೇಶಗಳಲ್ಲಿ ವಿದ್ಯಾರ್ಥಿ ಯುವ ಶಕ್ತಿಯಿಂದ ಸಾಮಾಜಿಕ, ರಾಜಕೀಯ ಆರ್ಥಿಕ ಬದಲಾವಣೆಗೆ ರಾಜಕೀಯ ಪರಿವರ್ತನೆಗೆ ಕಾರಣವಾಗಿದೆ. ವಿದ್ಯಾರ್ಥಿ ಸಂಘಟನೆ ಜಾತಿ, ಧರ್ಮ ಮೀರಿದ ವಿದ್ಯಾರ್ಥಿ ಸಮುದಾಯ ಎಲ್ಲಾ ಒಂದೇ ಎನ್ನುವ ಸಂಘಟಿತ ಪ್ರಜ್ಞಾವಂತ ವಿದ್ಯಾರ್ಥಿ ಸಮುದಾ ಯ ಈ ದೇಶಕ್ಕೆ ಅಗತ್ಯ ವಿದೆ. ಈ ನಿಟ್ಟಿನಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ರಚನೆಯಾಗಿದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸಮಾರಂಭದ ಅಧ್ಯಕ್ಷತೆವಹಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ , ಚಲನ ಚಿತ್ರ ನಿರ್ದೇಶಕ ಹರೀಶ್ ಶೇರಿಗಾರ್, ಕಿಶನ್ ಹೆಗ್ಡೆ ಕೊಳಕೆ ಬೈಲು , ಮೆರಿಲ್ ರೇಗೋ, ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ, ವಿನಯ ರಾಜ್ , ಅನಿಲ್ ,ದ.ಕ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರಾದ ಗಿರೀಶ್ ಆಳ್ವಾ, ಸುಹೈಲ್ ಕಂದಕ್, ಅಭಿಲಾಶ್, ಜಯಕುಮಾರ್ ಶೆಟ್ಟಿ,ಅಶೋಕ್ ಪೂಜಾರಿ, ಸುನಿಲ್, ರಾಕೇಶ್ ದೇವಾಡಿಗ, ಶ್ರೀಹರಿ, ಸುಧೀರ್ ಕುಮಾರ್ ಶೆಟ್ಟಿ, ನಝೀರ್ ಸಾಮಾಣಿಗೆ, ಬಶೀರ್ , ಹನೀಫ್, ಎನ್ ಎಸ್ ಯುಐ ಮುಖಂಡರಾದ ಸವಾದ್ ಸುಳ್ಯ, ರೂಪೇಶ್ ರೈ, ಸುಹಾನ್ ಆಳ್ವ, ಶಾಹುಲ್ ಬಜ್ಪೆ ಮೊದಲಾದ ವರು ಉಪಸ್ಥಿತರಿದ್ದರು. ಅಧ್ಯಕ್ಷ ಮಿಥುನ್ ರೈ ಸ್ವಾಗತಿಸಿದರು.







