ಮಾ.14ರಂದು ಕಿನ್ಯದಲ್ಲಿ ಕೂಟು ಝಿಯಾರತ್
ಮಂಗಳೂರು : ಹಝ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ (ಖ.ಸಿ) ಕಿನ್ಯ ಇವರ ಹೆಸರಲ್ಲಿ ವರ್ಷಪ್ರತಿ ನಡೆಯುವ ಕೂಟು ಝಿಯಾರತ್ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ಮಾ. 14ರಂದು ರಾತ್ರಿ ನಡೆಯಲಿದೆ.
ಕುಂಬೋಳ್ ಆಟಕೋಯ ತಂಙಳ್ ಹಾಗೂ ಅಮೀರ್ ತಂಙಳ್ ದುಆ ಆಶಿರ್ವಚನೆಯೊಂದಿಗೆ ಚಾಲನೆಗೊಳ್ಳಲಿದೆ. ಅಂತರಾಷ್ಟ್ರಿಯಾ ಪ್ರಭಾಷಣಗಾರ ಮೌಲಾನ ಶಮೀರ್ ದಾರಿಮಿ ಕೊಲ್ಲಂ ಭಾಷಣ ಮಾಡಲಿದ್ದಾರೆ.
ಮಾ. 18ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಉಲಮಾ, ಉಮರಾ, ವಿದ್ವಾಂಸರು, ಸಾದಾತುಗಳು ಭಾಗವಹಿಸಲಿದ್ದಾರೆ. ಮಾ. 18ರಂದು ನಡೆಯುವ ಕೂಟುಝಿಯಾರತ್ ಕಾರ್ಯಕ್ರಮದಲ್ಲಿ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತು ಕೋಯ ತಂಙಳ್, ಪಾಣಕ್ಕಾಡ್ ತಂಙಳ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





