ಭಟ್ಕಳದಲ್ಲಿ ರಾಜ್ಯ ಎಸ್ಸೆಸ್ಸೆಫ್ ಅಸಂಬ್ಲೇಜ್ ಕಾರ್ಯಾಗಾರಕ್ಕೆ ಚಾಲನೆ

ಭಟ್ಕಳ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ರಾಜ್ಯ ಕೌನ್ಸಿಲರ್ಸ್ ರಿಗೆ ಎರಡು ದಿನ ನಡೆಯಲಿರುವ ಅಸಂಬ್ಲೇಜ್ ಕಾರ್ಯಾಗಾರಕ್ಕೆ ತಾಜುಸ್ಸುನ್ನ ಭಟ್ಕಳದಲ್ಲಿ ಚಾಲನೆ ನೀಡಲಾಯಿತು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆ ವಹಿಸಿದ್ದರು.
ಸಯ್ಯದ್ ಅಲವೀ ತಂಙಳ್ ಕರ್ಕಿ ದುಆ: ಗೆ ನೇತೃತ್ವ ನೀಡಿದರು. ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ ಉದ್ಘಾಟಿಸಿದರು. ಎಸ್.ವೈ.ಎಸ್ ರಾಜ್ಯ ಸಾಂತ್ವನ ವಿಭಾಗದ ಚಯರ್ ಮ್ಯಾನ್ ಜಿ.ಎಮ್ ಮುಹಮ್ಮದ್ ಕಾಮಿಲ್ ಸಖಾಫಿ ತರಗತಿಯನ್ನು ನಡೆಸಿದರು. ಎಸ್ಸೆಸ್ಸೆಫ್ ರಾಜ್ಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ದ್ವಜಾರೊಹಣಗೈದರು.
ಕಾರ್ಯಕ್ರಮದಲ್ಲಿ ಮಜೀದ್ ಮಾಸ್ಟರ್ ಅರಿಯಲ್ಲೂರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ, ಕೊನೆಗೆ ವಂದಿಸಿದರು.

Next Story





