ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ನೂತನ ಸಭಾಂಗಣ ಉದ್ಘಾಟನೆ

ಮಂಗಳೂರು, ಮಾ.13: ಬದ್ರಿಯಾ ಜುಮಾ ಮಸೀದಿ ಹಯಾತುಲ್ ಇಸ್ಲಾಂ ಮದ್ರಸ, ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ನೂತನ ಸಭಾಂಗಣ ಉದ್ಘಾಟನಾ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಅಧ್ಯಕ್ಷತೆಯಲ್ಲಿ ಶನಿವಾರ ಬಜಾಲ್ ನಂತೂರ್‌ನಲ್ಲಿ ನಡೆಯಿತು.
ಸಭಾಂಗಣ ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ವಿದ್ಯೆಗಿಂತ ಮಿಗಿಲಾದ ದಾನ ಬೇರೊಂದಿಲ್ಲ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಕಲಿಕಾ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶ್ರಮಿಸಬೇಕು. ನಾನು ಈ ಸಂಸ್ಥೆಗೆ ಏನಾದರೂ ಅನುದಾನ ನೀಡಿದ್ದಲ್ಲಿ ಅದು ನನ್ನ ಸ್ವಂತ ದುಡ್ಡಲ್ಲ, ನಿಮ್ಮೆಲ್ಲರ ತೆರಿಗೆಯ ಹಣ, ಸಮಾಜದಿಂದ ಬಂದದ್ದು ಸಮಾಜಕ್ಕೆ ಸಲ್ಲಬೇಕು ಎಂದರು.
ಈ ವೇಳೆ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಜೆ.ಆರ್. ಲೋಬೊ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಡಾ.ಅಬ್ದುಲ್ ಶಕೀಲ್, ಸ್ಮಾರ್ಟ್ ಸಿಟಿ ಮ್ಯಾನೇಜರ್ ಅರುಣ್ ಪ್ರಭ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಜೆಎಂ ಖತೀಬ್ ಅಬ್ದುಲ್ ಖಾರ್ ಮದನಿ ದುಆ ನೆರವೇರಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮುಹಮ್ಮದ್ ಅಶ್ರಫ್ ಕರ್ನಿರೆ, ಕಾರ್ಪೊರೇಟರ್ ಅಶ್ರಫ್ ಬಜಾಲ್, ರಫೀಕ್ ಮಾಸ್ಟರ್, ಎಂ.ಕೆ. ಜಝ್ವಿರುದ್ದೀನ್, ಎಂ.ರಫೀಕ್ ಫೈಝಲ್ ನಗರ, ಬಿ.ಫಕ್ರುದ್ದೀನ್, ಶರತ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಅಧ್ಯಾಪಕ ಡೋಲ್ಪಿ ಸಿಕ್ವೇರಾ ಸ್ವಾಗತಿಸಿದರು. ಶಾಫೀ ಮಿಸ್ಬಾ ವಂದಿಸಿದರು. ಸ್ಟಾರ್ ನವಾಝ್ ನಿರೂಪಿಸಿದರು.






.jpg)
.jpg)
.jpg)
.jpg)

