ಎಲ್ಲರೂ ಸಂಕಷ್ಟದಲ್ಲಿರುವಾಗ ಅದಾನಿಯ ಸಂಪತ್ತು ಶೇ.50ರಷ್ಟು ಹೆಚ್ಚಾಗಿದ್ದು ಹೇಗೆ?: ರಾಹುಲ್ ಗಾಂಧಿ ಪ್ರಶ್ನೆ

ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಅತ್ಯಂತ ಕಠಿಣ ಸಮಯದಲ್ಲಿ ಎಲ್ಲರೂ ಹೆಣಗಾಡುತ್ತಿರುವಾಗ ಉದ್ಯಮಿ ಗೌತಮ್ ಅದಾನಿ ತನ್ನ ಸಂಪತ್ತನ್ನು ಹೇಗೆ ನಿರೀಕ್ಷೆಗೂ ಮೀರಿ ಹೆಚ್ಚಿಸಿಕೊಂಡರು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಪ್ರಶ್ನಿಸಿದ್ದಾರೆ.
ಬ್ಲೂಮ್ ಬರ್ಗ್ ವರದಿಯೊಂದನ್ನು ಟ್ಯಾಗ್ ಮಾಡಿ ರಾಹುಲ್ ಗಾಂಧಿ ಈ ಪ್ರಶ್ನೆ ಕೇಳಿದ್ದಾರೆ.
2021ರಲ್ಲಿ ಸಂಪತ್ತು ಗಳಿಕೆಯಲ್ಲಿ ಇಡೀ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಅದಾನಿ 12 ಲಕ್ಷ ಕೋಟಿ ರೂ. ಸಂಪಾದಿಸಿದ್ದಾರೆ. ಇದರೊಂದಿಗೆ ಒಟ್ಟು ನಿವ್ವಳ ಆಸ್ತಿ ಮೌಲ್ಯ 50 ಬಿಲಿಯನ್ ಅಮೆರಿಕನ್ ಡಾಲರ್ ಗೆ ಏರಿಕೆ ಕಂಡಿದೆ.
ದೇಶದ ಜನರೆಲ್ಲರೂ ಸಂಕಷ್ಟದಲ್ಲಿರುವಾಗ ಉದ್ಯಮಿ ಗೌತಮ್ ಅದಾನಿ ತಮ್ಮಸಂಪತ್ತನ್ನು ಶೇ.50ರಷ್ಟು ಹೆಚ್ಚಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು ರಾಹುಲ್ ಪ್ರಶ್ನಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 2020ರಲ್ಲಿ ನಿಮ್ಮ ಸಂಪಾದನೆ ಎಷ್ಟು ಹೆಚ್ಚಾಗಿದೆ. ಶೂನ್ಯ. ನೀವು ಬದುಕಲು ಹೆಣಗಾಡುತ್ತೀರಿ. ಆದರೆ ಅವರು(ಅದಾನಿ)12 ಲಕ್ಷ ಕೋಟಿ ರೂ. ಗಳಿಕೆ ಮಾಡಿ ತಮ್ಮ ಸಂಪತ್ತನ್ನು ಶೇ.50ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಇದು ಹೇಗೆ ಸಾಧ್ಯವಾಯಿತು ಎಂದು ಹೇಳಬಲ್ಲಿರಾ? ಎಂದು ಪ್ರಶ್ನೆ ಮಾಡಿದ್ದಾರೆ.
ವರದಿಯ ಪ್ರಕಾರ ಸಂಪತ್ತು ಗಳಿಕೆಯಲ್ಲಿ ವಿಶ್ವದಲ್ಲೇ ಅದಾನಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಅಮೆಝಾನ್ ಸಂಸ್ಥಾಪಕ ಹಾಗೂ ಸಿಇಒ ಜೆಫ್ ಬೆಜೋಸ್ ಹಾಗೂ ಟೆಸ್ಲಾ ಸಿಇಒ ಎಲನ್ ಮಸ್ಕ್ ಅವರನ್ನು ಅದಾನಿ ಹಿಂದಿಕ್ಕಿದ್ದಾರೆ.
How much did your wealth increase in 2020? Zero.
— Rahul Gandhi (@RahulGandhi) March 13, 2021
You struggle to survive while he makes ₹ 12 Lakh Cr and increases his wealth by 50%.
Can you tell me why? pic.twitter.com/5sW65Kx7bi







