ಚೊಚ್ಚಲ ಐಎಸ್ಎಲ್ ಪ್ರಶಸ್ತಿ ಜಯಿಸಿದ ಮುಂಬೈ ಸಿಟಿ ಎಫ್ ಸಿ
ಎಟಿಕೆ ಮೋಹನ್ ಬಗಾನ್ ವಿರುದ್ದ 2-1 ಅಂತರದ ಗೆಲುವು

photo: ISL/SPORTZPICS
ಮಾರ್ಗೋವಾ: ಶನಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿರುವ ಮುಂಬೈ ಸಿಟಿ ಎಫ್ ಸಿ ಮೊದಲ ಬಾರಿ ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್)ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಮಾರ್ಗೋವಾದ ಫಟೋರ್ಡಾ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 90ನೇ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸಿದ ಬಿಪಿನ್ ಸಿಂಗ್ ಮುಂಬೈ ಸಿಟಿ ಎಫ್ ಸಿ ಚಾಂಪಿಯನ್ ಆಗಲು ನೆರವಾದರು.
ಇದಕ್ಕೂ ಮೊದಲು 18ನೇ ನಿಮಿಷದಲ್ಲಿ ಗೋಲು ಗಳಿಸಿದ ಡೇವಿಡ್ ವಿಲಿಯಮ್ಸ್ ಅವರು ಎಟಿಕೆ ಮೋಹನ್ ಬಗಾನ್ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. 29ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಜೋಸ್ ಲೂಯಿಸ್ ಎಸ್ಪಿನೊಸಾ ಮುಂಬೈ ಸಿಟಿ ಎಫ್ ಸಿ ಸ್ಕೋರನ್ನು 1-1 ರಿಂದ ಸಮಬಲ ಗೊಳಿಸಲು ಕಾರಣರಾದರು.
ಉಭಯ ತಂಡಗಳು ಲೀಗ್ ಹಂತದಲ್ಲಿ ಒಂದೇ ರೀತಿಯ ದಾಖಲೆಯೊಂದಿಗೆ (12 ಗೆಲುವು, ಕೇವಲ ನಾಲ್ಕು ಸೋಲು)ಫೈನಲ್ ಗೆ ತಲುಪಿದ್ದವು.
Next Story





