ಪೊಲೀಸರಿಂದ ಕೊಲೆಯಾದ ‘ಜಾರ್ಜ್ ಫ್ಲಾಯ್ಡ್’ ಕುಟುಂಬಕ್ಕೆ 196 ಕೋಟಿ ರೂ. ಪರಿಹಾರ

ಫೈಲ್ ಚಿತ್ರ
ವಾಶಿಂಗ್ಟನ್, ಮಾ. 13: ಅಮೆರಿಕದ ಮಿನಸೋಟ ರಾಜ್ಯದಲ್ಲಿ, ಬಂಧನದ ವೇಳೆ ಬಿಳಿಯ ಪೊಲೀಸ್ ಅಧಿಕಾರಿಯ ಕೈಯಿಂದ ಸಾವಿಗೀಡಾಗಿರುವ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ರ ಕುಟುಂಬಕ್ಕೆ ಮಿನಪೊಲಿಸ್ ನಗರವು 27 ಮಿಲಿಯ ಡಾಲರ್ (ಸುಮಾರು 196 ಕೋಟಿ ರೂಪಾಯಿ) ಪರಿಹಾರ ನೀಡಲಿದೆ ಎಂದು ಜಾರ್ಜ್ ಫ್ಲಾಯ್ಡಾ ಕುಟುಂಬದ ವಕೀಲರು ಶುಕ್ರವಾರ ಘೋಷಿಸಿದ್ದಾರೆ.
ಇದು ಅಮೆರಿಕದ ಇತಿಹಾಸದಲ್ಲೇ ಪೊಲೀಸರ ಕೈಯಿಂದ ಅನ್ಯಾಯವಾಗಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಸಿಗುತ್ತಿರುವ ಅತ್ಯಧಿಕ ಪರಿಹಾರ ಮೊತ್ತವಾಗಿದೆ.
ಕಳೆದ ವರ್ಷದ ಮೇ 25ರಂದು ನಕಲಿ ಹಣ ಚಲಾಯಿಸಿದ ಆರೋಪದಲ್ಲಿ ಫ್ಲಾಯ್ಡ್ ರನ್ನು ಬಂಧಿಸಿದ ವೇಳೆ ಅವರು ಮೃತಪಟ್ಟಿದ್ದರು. ಫ್ಲಾಯ್ಡ್ರ ಕುತ್ತಿಗೆಯ ಮೇಲೆ ಮಿನಪೊಲಿಸ್ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್ ಮೊಣಕಾಲೂರಿ ಸುಮಾರು 8 ನಿಮಿಷಗಳ ಕೂತಿದ್ದಾಗ ಅವರು ಕೊನೆಯುಸಿರೆಳೆದಿದ್ದರು.
ಶಾವಿನ್ ಈಗ ಕೊಲೆ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
Next Story





