ಉಡುಪಿ: ಉಚಿತ ಗ್ಲುಕೋಮಾ ತಪಾಸಣಾ ಶಿಬಿರ ಉದ್ಘಾಟನೆ

ಉಡುಪಿ, ಮಾ.14: ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆ, ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗ ಮತ್ತು ಆಪ್ಟೊಮೆಟ್ರಿ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗ್ಲುಕೋಮಾ ಸಪ್ತಾಹದ ಅಂಗವಾಗಿ ಗ್ಲುಕೋಮಾ ಸಪೋರ್ಟ್ ಗ್ರೂಪ್ನ ಆರಂಭ ಮತ್ತು ಉಚಿತ ಗ್ಲುಕೋಮಾ ತಪಾಸಣಾ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ನಿವೃತ್ತ ಶಿಕ್ಷಕಿ, ಶಿಕ್ಷಣ ತಜ್ಞೆ ಶೈಲಾ ರಾವ್ ಮಾತನಾಡಿ, ಗ್ಲುಕೋಮಾ ಅನ್ನವುದು ಯಾವುದೇ ಲಕ್ಷಣವಿಲ್ಲದೇ ಕಂಡು ಬರುವುದರಿಂದ ಕಾಲಕಾಲಕ್ಕೆ ತಕ್ಕಂತೆ ಕಣ್ಣನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಂದೇ ಪರಿಹಾರ ಎಂದು ತಿಳಿಸಿದರು.
ಗ್ಲುಕೋಮಾ ಸಪೋರ್ಟ್ ಗ್ರೂಪ್ ಅನ್ನು ಮಣಿಪಾಲದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ವಿನೋದ್ ಭಟ್ ಉದ್ಘಾಟಿಸಿದರು. ಕೆಎಂಸಿ ಡೀನ್ ಡಾ. ಶರತ್ ಕುಮಾರ್, ಕೆಎಂಸಿ ಸಿಓಓ ಸಿ.ಜಿ.ಮುತ್ತನ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಆಪ್ಟೊಮೆಟ್ರಿ ಮುಖ್ಯಸ್ಥ ಡಾ.ರಮೇಶ್ ಎಸ್.ವಿ. ಉಪಸ್ಥಿತರಿದ್ದರು. ಕೆಎಂಸಿ ಸಹಾಯಕ ಪ್ರಾಧ್ಯಾಪಕ ಮತ್ತು ಗ್ಲುಕೋಮಾ ತಜ್ಞೆ ಡಾ.ನೀತಾ ಕೆಐಆರ್ ಮಾತನಾಡಿದರು.
ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಕಾಂತ್ ಸ್ವಾಗತಿಸಿದರು. ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸುಲತಾ ವಿ.ಭಂಡಾರಿ ವಂದಿಸಿದರು. ಗ್ಲುಕೋಮಾ ತಜ್ಞೆ ಡಾ.ಪ್ರಿಯಾಂಕಾ ರಮೇಶ್ ಮತ್ತು ಡಾ. ಅಲಿಶಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.







