ಹೆಜಮಾಡಿ: ಸೋಮವಾರ ಸರ್ವಿಸ್ ಬಸ್ ಸಂಚಾರ ಬಂದ್
ಪಡುಬಿದ್ರಿ, ಮಾ.14: ಹೆಜಮಾಡಿ ಟೋಲ್ನಲ್ಲಿ ಸರ್ವೀಸ್ ಬಸ್ಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾ.15ರಂದು ಸರ್ವೀಸ್ ಬಸ್ ಸಂಚಾರವನ್ನು ಬಂದ್ ಮಾಡಿ ಪ್ರತಿಭಟಿಸಲು ಬಸ್ ಮಾಲಕರು ನಿರ್ಧರಿಸಿದ್ದಾರೆ.
ಹೆಜಮಾಡಿ ಟೋಲ್ ಒಳ ರಸ್ತೆಗೆ ಟೋಲ್ ಅಳವಡಿಸಿದ್ದು ಇದುವರೆಗೆ ಬಸ್ ಸಂಚಾರಕ್ಕೆ ಟೋಲ್ ವಿನಾಯಿತಿ ನೀಡಲಾಗುತಿತ್ತು. ಫಾಸ್ಟ್ ಟ್ಯಾಗ್ ಕಡ್ಡಾಯದ ಬಳಿಕ ವಿನಾಯಿತಿ ನಿಲ್ಲಿಸಲಾಗಿದೆ. ಇದರಿಂದ ಬಸ್ ಸಂಚಾರ ನಡೆಸಲು ಆಗುವುದಿಲ್ಲ ಎಂದು ವಲಯ ಬಸ್ ಮಾಲಕರ ಸಂಫದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ ತಿಳಿಸಿದ್ದಾರೆ.
Next Story





