ಕಾರಿನಲ್ಲಿ ದನದ ಮಾಂಸ ಸಾಗಾಟ: ಇಬ್ಬರ ಬಂಧನ
ಬೈಂದೂರು, ಮಾ.14: ಕಾರಿನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಮಾ.13ರಂದು ರಾತ್ರಿ ಶಿರೂರು ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ.
ಭಟ್ಕಳ ಶೌಕತ್ ಅಲಿ ಸ್ಟ್ರೀಟ್‌ನ ಸೈಯದ್ ಮೊಸ್ಸಿನ್ ಲಂಕಾ(52) ಹಾಗೂ ಭಟ್ಕಳ ಜಾಲಿ ನಿವಾಸಿ ಇಷ್ತಿಯಾಕ್ ಅಹಮ್ಮದ್ ಇಕ್ಕೇರಿ(41) ಬಂಧಿತ ಆರೋಪಿಗಳು. ಕಾರಿನಲ್ಲಿ ಮೀನು ತುಂಬುವ ಬಾಕ್ಸ್‌ನಲ್ಲಿ ದನದ ಮಾಂಸ ತುಂಬಿಸಿಕೊಂಡು ಭಟ್ಕಳ ಕಡೆಯಿಂದ ಬರುತ್ತಿರುವ ಕುರಿತ ಮಾಹಿತಿಯಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ 40ಸಾವಿರ ರೂ. ಮೌಲ್ಯದ ಒಟ್ಟು ಸುಮಾರು 150 ಕೆ.ಜಿ ತೂಕದ ಮಾಂಸ ಹಾಗೂ 5ಲಕ್ಷ ರೂ. ಮೌಲ್ಯದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





