ಮ್ಯಾನ್ಮಾರ್: ಸೇನಾಡಳಿತ ವಿರುದ್ಧ ಮುಂದುವರಿದ ಪ್ರತಿಭಟನೆ; ಇಬ್ಬರು ಮೃತ್ಯು

ಯಾಂಗನ್ (ಮ್ಯಾನ್ಮಾರ್), ಮಾ. 14: ಮ್ಯಾನ್ಮಾರ್‌ನ ಸೇನಾಡಳಿತದ ವಿರುದ್ಧದ ಪ್ರತಿಭಟನೆ ರವಿವಾರವೂ ಮುಂದುವರಿದಿದೆ. ಪ್ರತಿಭಟನಕಾರರ ಮೇಲೆ ಭದ್ರತಾ ಪಡೆಗಳು ನಡೆಸಿದ ಗೋಲಿಬಾರಿಗೆ ರವಿವಾರ ಇಬ್ಬರು ಬಲಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಾಣಿಜ್ಯ ರಾಜಧಾನಿ ಯಾಂಗನ್ ಸಮೀಪದ ಬಾಗೊ ಎಂಬಲ್ಲಿ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಓರ್ವ ಯುವಕ ಮೃತಪಟ್ಟಿದ್ದಾರೆ. ಹಪಕಂಟ್ ಪಟ್ಟಣದಲ್ಲಿ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇನ್ನೋರ್ವ ವ್ಯಕ್ತಿ ಬಲಿಯಾಗಿದ್ದಾರೆ.
ಶನಿವಾರ ಪ್ರತಿಭಟನಕಾರರ ಮೇಲೆ ಪೊಲೀಸರು ಹಾರಿಸಿದ ಗುಂಡಿಗೆ 7 ಮಂದಿ ಬಲಿಯಾಗಿದ್ದಾರೆ.
Next Story





