Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುಳ್ಯ: ಅಡಿಕೆ ಹಳದಿ ರೋಗ ಹೋರಾಟ ಸಮಿತಿ...

ಸುಳ್ಯ: ಅಡಿಕೆ ಹಳದಿ ರೋಗ ಹೋರಾಟ ಸಮಿತಿ ಸಭೆ

ವಾರ್ತಾಭಾರತಿವಾರ್ತಾಭಾರತಿ14 March 2021 10:07 PM IST
share

ಸುಳ್ಯ: ಮಾ13.ಮಲೆನಾಡು ಜನಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಅಡಿಕೆ ಹಳದಿ ರೋಗ ಹೋರಾಟ ಸಮಿತಿ ಸಭೆ ಕಲ್ಲುಗುಂಡಿ ಸಮನ್ವಯ ಸಹಕಾರಿ ಸಭಾಭವನದಲ್ಲಿ ಜರಗಿತು.

ಅಡಿಕೆ ಹಳದಿ ರೋಗ ಬಾದಿತ ಸಂತ್ರಸ್ತ ಕೃಷಿಕರನ್ನುದ್ದೇಶಿಸಿ ಮಾತನಾಡಿದ ವೇದಿಕೆ ಕೇಂದ್ರ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ, ಸತತ 40ವರ್ಷಗಳಿಂದ ಹೋರಾಟ ನಡೆಸುತಿದ್ದರೂ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳಿಗೆ ಭಯವಿಲ್ಲವೆಂದಾದರೆ ನಾವು ಪಕ್ಷಗಳ ತತ್ವ-ಸಿದ್ದಾಂತಗಳ ಭ್ರಮೆಯಲ್ಲಿ ಮುಳುಗಿದ್ದೇವೆ ಎಂಬುದೇ ಕಾರಣ. ಜನಸಾಮಾನ್ಯರು‌ ಕೂಡ ಹಳ್ಳಿಯಿಂದ ದಿಲ್ಲಿಯವರೆಗೆ ನಮ್ಮನಾಳುವ ಪ್ರತಿನಿಧಿಗಳ ಮತ್ತು ಅಧಿಕಾರಿವರ್ಗವನ್ನು ಸಂಪರ್ಕದಲ್ಲಿಟ್ಟುಕೊಳ್ಳುವ ಶಕ್ತಿಯಿದ್ದರೂ ನಮ್ಮ ಹಕ್ಕುಬೇಡಿಕೆಗಳನ್ನ ಈಡೇರಿಸಿಕೊಳ್ಳಲು ನಾವ್ಯಾಕೆ ಸಫಲರಾಗುತಿಲ್ಲ ಎಂಬುದನ್ನ ಅರಿತುಕೊಳ್ಳಬೇಕು. ಪ್ರಜಾಪ್ರಭುತ್ವದ ಹಕ್ಕು, ಕರ್ತವ್ಯಗಳನ್ನ ಚೆನ್ನಾಗಿ ಅರಿತು ಪ್ರಶ್ನಿಸುವ ನಮ್ಮಧ್ವನಿ ಪ್ರಬಲವಾಗಬೇಕು. ನಮ್ಮ ಹೋರಾಟ ಯಾವುದೇ ಪಕ್ಷಗಳ ಮತ್ತು ನಾಯಕರ ವಿರುದ್ಧವಲ್ಲ ಬದಲಾಗಿ ನಮ್ಮ ಗಂಭೀರ ಸಮಸ್ಯೆಯ ವಿರುದ್ಧ. ಯಾವುದೇ ಒತ್ತಡ ಎದುರಾದರು ಚುನಾವಣೆಯ ತಂತ್ರಗಾರಿಕೆ ಮಾದರಿಯಲ್ಲಿ ಪ್ರತೀ ಮನೆಮನಗಳನ್ನ ಎಚ್ಚರಿಸುವ ಮೂಲಕ ಅಂತಿಮ ಹೋರಾಟ ನಡೆಸಿ ನಿರ್ಣಾಯಕವಾದ ಗೆಲುವು ಸಾಧಿಸೋಣ. ಅಡಿಕೆ ಹಳದಿ ರೋಗ ಸಮಸ್ಯೆ ವಿರುದ್ಧವು ಹೋರಾಟದ ಯಶಸ್ಸು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಪಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಮಾತನಾಡಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಅಡಿಕೆ ಹಳದಿ ರೋಗ ವಿರುದ್ಧದ ನಡೆಸುವ ಹೋರಾಟ ಹೊಸ ಭರವಸೆ ಮೂಡಿಸಿದೆ. ಬಾದಿತ ಗ್ರಾಮಸ್ಥರು ವೇದಿಕೆ ನೇತೃತ್ವದ ಹೋರಾಟದಲ್ಲಿ ಪಕ್ಷಾತೀತವಾಗಿ ಬೆಂಬಲ ವ್ಯಕ್ತ ಪಡಿಸುವಂತೆ ಮನವಿ ಮಾಡಿದರು.

ಅರಂತೋಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ ಅಡಿಕೆ ಹಳದಿ ರೋಗದಿಂದಾಗಿ ಜನತೆ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ.ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕಿದೆ. ಅದಕ್ಕಾಗಿ ಪಕ್ಷಾತೀತ ಹೋರಾಟ ಕೈಗೊಳ್ಳುವಂತೆ ಮನವಿ‌ ಮಾಡಿದರು.

ಅಡಿಕೆ ಹಳದಿ ರೋಗ ಬಗ್ಗೆ ವಿಷಯ ಮಂಡಿಸಿದ ಮಾಜಿ ಗ್ರಾ.ಪಂ.ಅಧ್ಯಕ್ಷ ಹಾಗು ಹೋರಾಟಗಾರರಾದ ಜಗದೀಶ್ ಕುಯಿಂತೋಡು, ಅನೇಕ ವರ್ಷಗಳಿಂದ ಹೋರಾಟ ಮೂಲಕ ಸರಕಾರದ ಗಮನ ಸೆಳೆಯುತಿದ್ದರು ಸರಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಾಧ್ಯವಾಗಿಲ್ಲ. ಈ ಬಾರಿ‌ ಕೊನೆಯದಾಗಿ ಬಲಿಷ್ಟ ಎದಿರೇಟು ನೀಡಬೇಕು. ಅದಕ್ಕಾಗಿ ಪ್ರತಿಯೊಬ್ಬ ಬಾದಿತ ಗ್ರಾಮಸ್ಥರು ಯಶಸ್ವಿ ಹೋರಾಟಕ್ಕೆ ಕೈಜೋಡಿಸಬೇಕಾಗಿದೆ ಎಂದರು.

ವೇದಿಕೆ ಹೋರಾಟ ಪ್ರಮುಖರಾದ ವರದರಾಜ್ ಸಂಕೇಶ್ ಸ್ವಾಗತಿಸಿದರು. ಬನ್ನೂರು ಪಟ್ಟೆ ಪ್ರದೀಪ್ ಕುಮಾರ್ ಕರಿಕೆ ನಿರೂಪಿಸಿ, ವಂದಿಸಿದರು. ವೇದಿಕೆಯಲ್ಲಿ ಸಮಿತಿಯ ಹೋರಾಟ ಪ್ರಮುಖರಾದ ಉಮೇಶ್ ಕಜ್ಜೋಡಿ ಉಪಸ್ಥಿತರಿದ್ದರು. ಮಲೆನಾಡು ವೇದಿಕೆಯ ಪ್ರಮುಖರಾದ ಭಾನುಪ್ರಕಾಶ್ ಪೆರುಮುಂಡ, ಜಯರಾಮ ಕಟ್ಟೆಮನೆ, ಭರತ್ ಕನ್ನಡ್ಕ ಉಪಸ್ಥಿತರಿದ್ದರು.

ಅರಂತೋಡು, ದ.ಕ. ಮತ್ತು ಕೊಡಗು ಸಂಪಾಜೆಯ ವಿವಿಧ ಪಕ್ಷ ಮತ್ತು ಸಂಘಟನೆಗಳ ಪ್ರಮುಖರು ಹೋರಾಟಗಾರರು ಉಪಸ್ಥಿತರಿದ್ದರು.

ಜನಪ್ರತಿನಿದಿಗಳದ್ದು ಭರವಸೆ ಮಾತ್ರ,ಹೋರಾಟದ ಬಿಸಿ ಮುಟ್ಟಿಸಿದಾಗ ಮಾತ್ರ ನಮ್ಮ ಬೇಡಿಕೆಗೆ ಅರ್ಥ ಬರುತ್ತದೆ. ಬಾದಿತ ಗ್ರಾಮಗಳ ಜನತೆಯ ಪೂರ್ಣ ಸಾಲ ಮನ್ನಾ ಆಗಲೇ ಬೇಕು.ಪಕ್ಷಾತೀತ ಉಗ್ರ ಹೋರಾಟ ನಡೆಯಬೇಕು. ಗ್ರಾಮಸ್ಥರು ಒಂದಾಗಬೇಕು

–ಮಹಮ್ಮದ್ ಕುಂಞಿ, ಗೂನಡ್ಕ,

ಸಹಕಾರಿ ಹಾಗು ವಾಣಿಜ್ಯ ಬ್ಯಾಂಕ್ ಗಳಲ್ಲಿನ ‌ಪೂರ್ಣ ಸಾಲಮನ್ನಾವಾಗಬೇಕು, ಜೊತೆಗೆ ರೋಗದ ಬಗ್ಗೆ ಸಂಶೋಧನೆ ನಡೆಯಬೇಕು. ಬಾದಿತ ಪ್ರದೇಶದ ಪಂಚಾಯತ್ ಸದಸ್ಯರು ನಿರ್ಣಯ ಕೈಗೊಳ್ಳಬೇಕು. 

–ಶ್ರೀನಿವಾಸ ನಿಡಿಂಜಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X