ಗುಂಡ್ಲುಪೇಟೆ ಬಫರ್ ಝೋನ್ ಅರಣ್ಯದಲ್ಲಿ ಬೆಂಕಿ: ನೂರಾರು ಎಕರೆ ಪ್ರದೇಶ ನಾಶ

ಗುಂಡ್ಲುಪೇಟೆ: ಗುಂಡ್ಲುಪೇಟೆ ಬಫರ್ ಝೋನ್ ಗೆ ಸೇರಿದ ಅರಣ್ಯದಲ್ಲಿ ಬೆಂಕಿ ಅವಘಡಕ್ಕೆ ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ.
ಗುಂಡ್ಲುಪೇಟೆ ತಾಲೂಕಿನ ತ್ರಿಯಂಭಕಪುರ ಸಮೀಪದ ಗುಡ್ಡಕ್ಕೆ ಬೆಂಕಿ ಬಿದ್ದು ಸೆಕ್ಷನ್ 4ಗೆ ಸೇರಿದ ನೂರಾರು ಎಕರೆಗೂ ಹೆಚ್ಚಿನ ಕುರುಚಲು ಅರಣ್ಯ ಪ್ರದೇಶ ಭಸ್ಮವಾಗಿದೆ.
ಬಂಡೀಪುರ ಅಭಯಾರಣ್ಯ ವ್ಯಾಪೀಯ ಗುಂಡ್ಲುಪೇಟೆ ಬಫರ್ ಝೋನ್ ವಲಯಕ್ಕೆ ಸೇರಿದ ಗ್ರಾಮದ ಅಡ್ಡಾಣಿ ಬೆಟ್ಟ ಹಾಗೂ ದೊಡ್ಡಬೆಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ರಾತ್ರಿಯವರೆಗೂ ನಿಯಂತ್ರಣಕ್ಕೆ ಬಂದಿರಲಿಲ್ಲ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಅಗ್ನಿಶಾಮಕ ವಾಹನಗಳೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಗಾಳಿಯ ರಭಸಕ್ಕೆ ಬೆಂಕಿ ಬೆಟ್ಟದ ತುದಿಯತ್ತ ವೇಗವಾಗಿ ಸಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು.
ಕಳೆದ ಸೋಮವಾರ ಸಮೀಪದ ಪಾರ್ವತಾಂಬಾ ಬೆಟ್ಟದ ಸುತ್ತಲಿನ ಮೂರು ಗುಡ್ಡಗಳಿಗೂ ವ್ಯಾಪಿಸಿದ ಬೆಂಕಿಯಿಂದ ನೂರರಿಂದ ಇನ್ನೂರು ಎಕರೆ ಭಸ್ಮವಾಗಿತ್ತು.
Next Story





