Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ15 March 2021 12:10 AM IST
share
ಓ ಮೆಣಸೇ...

ಪಶ್ಚಿಮ ಬಂಗಾಳದ ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳಿಗಾಗಿ ಎದ್ದು ನಿಂತು ಹೋರಾಡುವ ಭರವಸೆ ನೀಡುತ್ತೇನೆ - ಮಿಥುನ್ ಚಕ್ರವರ್ತಿ, ನಟ
ಈ ಪ್ರಾಯದಲ್ಲಿ ನಿಮ್ಮನ್ನು ನಾಯಕನನ್ನಾಗಿಸಿ ಸಿನೆಮಾ ತೆಗೆಯಲು ಹೊರಟ ನಿರ್ಮಾಪಕರನ್ನು ಅಭಿನಂದಿಸಬೇಕು.


ಸಿದ್ದರಾಮಯ್ಯ ಮತ್ತು ಡಿಕೆಶಿ ಜೋಡೆತ್ತಲ್ಲ , ಅಧಿಕಾರಕ್ಕಾಗಿ ಕಾದಾಡುತ್ತಿರುವ ಹೋರಿಗಳು - ಶ್ರೀರಾಮುಲು, ಸಚಿವ
ಸಿಡಿಯೊಳಗಿರುವ ಬಿಜೆಪಿ ಹೋರಿಗಳಿಗಿಂತ ಇವರೇ ವಾಸಿ.


ಆಧುನಿಕ ಯುಗದ ಗ್ರಾಫಿಕ್‌ಗೆ ಬಲಿಪಶುವಾಗುವ ಭಯ ನನ್ನನ್ನು ಕಾಡುತ್ತಿದೆ - ಸಿ.ಪಿ.ಯೋಗೇಶ್ವರ್, ಸಚಿವ
ಯಾವ ಲಾಡ್ಜ್‌ನಲ್ಲಿ ಈ ಗ್ರಾಫಿಕ್ ನಡೆದಿರಬಹುದು ಎನ್ನುವುದನ್ನು ಹೇಳಬಹುದೇ?


ಗೋ ಹಂತಕರ ಪರ ನಿಂತ ಕಾಂಗ್ರೆಸ್‌ಗೆ ಗೋಹತ್ಯೆಯ ಶಾಪ ತಟ್ಟಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಬಿಜೆಪಿಗೆ ಗೋವುಗಳನ್ನು ಸಾಕುವ ರೈತರ ಶಾಪ ತಟ್ಟಿದೆ.


ಹಳೆ ಕಾರು ಗುಜರಿಗೆ ಹಾಕಿದರೆ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಶೇ.5ರಷ್ಟು ರಿಯಾಯಿತಿ ಸಿಗಲಿದೆ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಕಾರುಗಳನ್ನೇ ಯಾಕೆ, ಇಡೀ ದೇಶವನ್ನು ಗುಜರಿಗೆ ಕೊಡಲು ಒಬ್ಬರು ಸಿದ್ಧರಿದ್ದಾರೆ. ಅವರಿಗೆ ಎಷ್ಟು ಪರ್ಸೆಂಟ್ ರಿಯಾಯಿತಿ ಸಿಗಲಿದೆ ಹೇಳಿ.


ಈ ಬಾರಿ ಮಮತಾ ಬ್ಯಾನರ್ಜಿಯ ಟಿಎಂಸಿ ಗೆದ್ದರೆ ಪಶ್ಚಿಮ ಬಂಗಾಳ ಕಾಶ್ಮೀರವಾಗಲಿದೆ - ಸುವೇಂದು ಅಧಿಕಾರಿ, ಪಶ್ಚಿಮ ಬಂಗಾಳ ಬಿಜೆಪಿ ನಾಯಕ
ಅಂದರೆ ಪಶ್ಚಿಮ ಬಂಗಾಳಕ್ಕೂ ಸೇನೆ ನುಗ್ಗಿಸುತ್ತೀರಿ ಎಂದಾಯಿತು.


ಬಿಜೆಪಿಗೆ 5 ವರ್ಷ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟರೆ ಕೇರಳವನ್ನು ನಂ.1 ಮಾಡುತ್ತೇವೆ - ಅಮಿತ್ ಶಾ, ಕೇಂದ್ರ ಸಚಿವ
ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೇರಳ ಈಗಾಗಲೇ ನಂ. 1 ಆಗಿದೆ. ನಿಮ್ಮ ಕೈಗೆ ಅಧಿಕಾರ ಕೊಟ್ಟರೆ ಏನು ಮಾಡುತ್ತೀರಿ ಎನ್ನುವುದು ಜನರಿಗೆ ಸ್ಪಷ್ಟವಾಗಿ ಗೊತ್ತಿದೆ.


ಚೀನಾ ಮತ್ತು ಭಾರತ ಪರಸ್ಪರರನ್ನು ಸಂಶಯದಿಂದ ನೋಡಬಾರದು - ವಾಂಗ್ ಯಿ, ಚೀನಾ ವಿದೇಶಾಂಗ ಸಚಿವ
ನೀವು ಬೆನ್ನಿಗೆ ಇರಿದ ಚಾಕುವನ್ನು ಭಾರತ ಗೌರವಪೂರ್ವಕವಾಗಿ ಸ್ವೀಕರಿಸಬೇಕೇ?


ಭಾರತದ ಸಂಪ್ರದಾಯಗಳು ಜಾಗತಿಕ ಮಾನ್ಯತೆ ಪಡೆಯಲು ಜಾತ್ಯತೀತವಾದವು ಬಹುದೊಡ್ಡ ಅಡ್ಡಿಯಾಗಿದೆ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಜಾತೀಯತೆ, ಅಸ್ಪಶ್ಯತೆ ಮೊದಲಾದ ಸಂಪ್ರದಾಯಗಳಿಗೆ ಜಾಗತಿಕ ಮಾನ್ಯತೆ ದೊರಕಿಸುವ ಪ್ರಯತ್ನದಲ್ಲಿದ್ದಾರೆ.


ಪ.ಬಂಗಾಳದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಪ್ರಧಾನಿ ಮೋದಿಗೆ ದಿಲ್ಲಿಯ ರೈತರನ್ನು ಭೇಟಿಯಾಗಲು ಸಮಯವಿಲ್ಲ -ಶರದ್ ಪವಾರ್, ಎನ್‌ಸಿಪಿ ವರಿಷ್ಠ
ರೈತರೇ ತನ್ನ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಬಹುದಲ್ಲ ಎಂದು ಮೋದಿ ಕೇಳುತ್ತಿದ್ದಾರೆ.


ಈ ದೇಶದ ಹೆಸರನ್ನು ನರೇಂದ್ರ ಮೋದಿ ಎಂದು ಬದಲಾಯಿಸುವ ದಿನಗಳು ದೂರವಿಲ್ಲ - ಮಮತಾ ಬ್ಯಾನರ್ಜಿ, ಪ.ಬಂ.ಮುಖ್ಯಮಂತ್ರಿ
ಹಾಗೆ ಬದಲಾಯಿಸುವುದಕ್ಕೆ ಅಷ್ಟರಲ್ಲಿ ದೇಶವೆನ್ನುವುದು ಉಳಿದಿರಬೇಕಲ್ಲ?


ಯಡಿಯೂರಪ್ಪ ಸರಕಾರ ಬಜೆಟ್‌ನಲ್ಲಿ ಬಿಚ್ಚಿಟ್ಟ್ಟದ್ದಕ್ಕಿಂತ ಮುಚ್ಚಿಟ್ಟಿದ್ದೆ ಹೆಚ್ಚು -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಮುಚ್ಚಿಟ್ಟದ್ದೆಲ್ಲ ಸಿಡಿಯ ಮೂಲಕ ಬಿಚ್ಚಿಡಲಾಗಿದೆ.


75ನೇ ಸ್ವಾತಂತ್ರೋತ್ಸವವು ಸನಾತನ ಭಾರತದ ಹೆಮ್ಮೆಯಾಗಿದೆ - ನರೇಂದ್ರ ಮೋದಿ, ಪ್ರಧಾನಿ
ಸನಾತನ ಭಾರತದಲ್ಲಿ ಎಮ್ಮೆ ಎಲ್ಲಿ ಬಂತು, ಗೋವು ಎಂದಿದ್ದರೆ ಸರಿಯಾಗುತ್ತಿತ್ತು.


ಸಿಡಿ ಪ್ರಕರಣದಲ್ಲಿ ನನ್ನ ಮನೋಬಲ ಹೆಚ್ಚಿಸಿದ ಎಚ್.ಡಿ.ಕುಮಾರಸ್ವಾಮಿಗೆ ಕೃತಜ್ಞತೆಗಳು - ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಆ ಯುವತಿಗೆ ಕೃತಜ್ಞತೆಯಿಲ್ಲವೇ?


ಬುದ್ಧಿ ಕೈಯಲ್ಲಿದ್ದಿದ್ದರೆ ಆರು ಮಂತ್ರಿಗಳು ತಮ್ಮ ಬಗ್ಗೆ ಸುದ್ದಿ ಪ್ರಸಾರ ಮಾಡದಂತೆ ನಿರ್ಬಂಧ ತೆಗೆದುಕೊಳ್ಳುವ ಅಗತ್ಯ ಇರಲಿಲ್ಲ. - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಬುದ್ಧಿ ಕೈಯಲ್ಲಿದ್ದಿದ್ದರೆ ಅವರೇಕೆ ಸಿಡಿಯೊಳಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದರು?


ಹಣಕಾಸು ಇಲಾಖೆಯನ್ನು ಮುಖ್ಯಮಂತ್ರಿಯಾದವರು ತಮ್ಮಲ್ಲೇ ಇಟ್ಟುಕೊಳ್ಳಬಾರದು - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಹಣಕಾಸನ್ನು ನಿಮಗೆ ಹಂಚಿ, ಇಲಾಖೆಯನ್ನು ಮಾತ್ರ ಅವರೇ ಇಟ್ಟುಕೊಂಡರೆ ಆಗಬಹುದೇ?


ಸಿಡಿ ಮಾಡುವುದು, ಅದನ್ನು ಮುಂದಿಟ್ಟು ಬ್ಲಾಕ್ ಮೇಲ್ ಮಾಡುವುದು ಒಳ್ಳೆಯದಲ್ಲ -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ತೋರ್ಸು, ತೋರ್ಸು, ತೋರ್ಸು ಎಂಬ ಮನವಿಗೆ ಓಗೊಟ್ಟು ಸಿಡಿ ಬಿಡುಗಡೆ ಮಾಡಿರಬೇಕು.


ಸಣ್ಣ ಹಳ್ಳಿಯಿಂದ ಬಂದ ಪಕ್ಷದ ಸಾಮಾನ್ಯ ಕಾರ್ಯಕರ್ತನಾದ ನಾನು ಉತ್ತರಾಖಂಡದ ಸಿಎಂ ಆಗುವೆನೆಂದು ಎಂದೂ ಕನಸು ಕಂಡಿರಲಿಲ್ಲ - ತೀರಥ್ ಸಿಂಗ್ ರಾವತ್, ಉತ್ತರಾಖಂಡದ ನೂತನ ಸಿಎಂ
ಈಗಾಗಲೇ ತತ್ತರಗೊಂಡಿರುವ ಉತ್ತರಾಖಂಡಕ್ಕೆ ಅದೇನು ಕಾದಿದೆಯೋ?


 ಪ್ಯಾಂಟು ಜಾರಿದರೆ ಅವರ ಪ್ಯಾಂಟನ್ನು ಅವರೇ ಹಾಕಿಕೊಳ್ಳಬೇಕು, ಮತ್ತೊಬ್ಬರು ಹಾಕುವುದಕ್ಕೆ ಆಗುವುದಿಲ್ಲ
 - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಆದರೆ ಇದು ಜಾರಿದ್ದಲ್ಲವಂತೆ, ತಾವು ಜಾರಿಸಿದ್ದಂತೆ.


ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ಇರಬೇಕು ಎಂಬುದು ಸರಕಾರದ ನಿರ್ಧಾರ - ಬಸವರಾಜ ಬೊಮ್ಮಾಯಿ, ಸಚಿವ
ಬಹುಶಃ ಅದಕ್ಕೇ ಮೇಲ್ಜಾತಿಗೆ 10 ಶೇಕಡ ಮೀಸಲಾತಿ ನೀಡಿರಬೇಕು.


ಜೈ ಶ್ರೀರಾಮ್, ಭಾರತ್ ಮಾತಾಕಿ ಜೈ ಎಂದು ಕೂಗುವುದು ತಪ್ಪಾ? - ಕೆ.ಎಸ್.ಈಶ್ವರಪ್ಪ, ಸಚಿವ
ಕೈಯಲ್ಲಿ ಚೂರಿ ಹಿಡಿದುಕೊಂಡು, ನಾಲಗೆಯಲ್ಲಿ ಹೊಲಸು ಇಟ್ಟುಕೊಂಡು ಕೂಗುವುದು ತಪ್ಪು.


ಮುಖ್ಯಮಂತ್ರಿ ಯಡಿಯೂರಪ್ಪರ ಒಂದು ಸಿಡಿ ಇದೆ ಎಂದು ಅವರ ಮಂತ್ರಿಗಳೇ ಹೇಳುತ್ತಿದ್ದಾರೆ - ವಾಟಾಳ್ ನಾಗರಾಜ್, ವಾಟಾಳ್ ಪಕ್ಷದ ಅಧ್ಯಕ್ಷ
ಅದರಲ್ಲಿ ಬಿಜೆಪಿ ಸರಕಾರದ ಕ್ಲೈಮಾಕ್ಸ್ ದೃಶ್ಯಗಳಿರಬೇಕು.


ಅಶ್ಲೀಲ ವೀಡಿಯೊ ಬಗ್ಗೆ ಅನುಮಾನ ವ್ಯಕ್ತಪಡಿಸುವ ಸ್ವಾತಂತ್ರ ಎಲ್ಲರಿಗೂ ಇದೆ. ಆಕಾರಣಕ್ಕೆ ನಾನೂ ಅನುಮಾನ ವ್ಯಕ್ತಪಡಿಸಿದ್ದೇನೆ - ಶ್ರೀರಾಮುಲು, ಸಚಿವ
ನಿಮಗೆ ಅದರಲ್ಲಿ ಯಾವ ದೃಶ್ಯದ ಕುರಿತಂತೆ ಅನುಮಾನ ಇದೆ ಎನ್ನುವುದನ್ನು ಹೇಳಿ ಮಾನ ಉಳಿಸಿಕೊಳ್ಳಿ.


ಕಾಂಗ್ರೆಸ್‌ನ ತಪ್ಪು ಹಾಗೂ ಜನವಿರೋಧಿ ನೀತಿಗಳಿಂದಾಗಿ ಬಿಜೆಪಿ ಅಧಿಕಾರಕ್ಕೇರುವಷ್ಟು ಪ್ರವರ್ಧಮಾನಕ್ಕೆ ಬಂತು- ಮಾಯಾವತಿ, ಬಿಎಸ್‌ಪಿ ನಾಯಕಿ
ನಿಮ್ಮ ಬಹುಜನ ವಿರೋಧಿ ನೀತಿಯಿಂದ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವಂತಾಯಿತು.


ಆತ್ಮ ನಿರ್ಭರ ಭಾರತವು ಜಗತ್ತಿಗೇ ಒಳ್ಳೆಯದು - ನರೇಂದ್ರ ಮೋದಿ, ಪ್ರಧಾನಿ
ಜಗತ್ತಿಗೆ ಒಳ್ಳೆಯದು ಮಾಡುವುದಕ್ಕಾಗಿ ಭಾರತವನ್ನು ಬಲಿ ಕೊಡುವುದೇ?


ಬಾಹುಬಲಿ ಕಾವ್ಯ ಬರೆಯುತ್ತ ನಾನೇ ಬದಲಾದೆ - ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ
ಬಾಹುಬಲಿ ಯುದ್ಧ ಗೆದ್ದು ವಿರಾಗಿಯಾದ. ನೀವೋ ಚುನಾವಣೆ ಸೋತು ವಿರಾಗಿಯಾದಿರಿ. ಇಷ್ಟೇ ವ್ಯತ್ಯಾಸ.

share
ಪಿ.ಎ.ರೈ
ಪಿ.ಎ.ರೈ
Next Story
X