ಆಲಡ್ಕ: ಎಸ್.ವೈ.ಎಸ್. ಇಜ್ತಿನಾಬ್-90 ಜಾಗೃತಿ ಅಭಿಯಾನಕ್ಕೆ ಚಾಲನೆ

ಬಂಟ್ವಾಳ, ಮಾ.15: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈ ಎಸ್) ರಾಜ್ಯ ಸಮಿತಿ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡ ‘ಇಜ್ತಿನಾಬ್-90’ ಎಂಬ ಅಭಿಯಾನದ ಉದ್ಘಾಟನಾ ಸಮಾರಂಭವು ಆಲಡ್ಕದಲ್ಲಿರುವ ಎಸ್. ಎಸ್. ಆಡಿಟೋರಿಯಂನಲ್ಲಿ ಶನಿವಾರ ನಡೆಯಿತು.
ಅಸ್ಸೈಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಅಭಿಯಾನವನ್ನು ಉದ್ಘಾಟಿಸಿದರು. ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ವಿಚಾರಗಳ ಬಗ್ಗೆ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಸುನ್ನೀ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ, ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ವಿಚಾರ ಮಂಡಿಸಿದರು
ಅಸ್ಸೈಯದ್ ಜಮಾಲುಲ್ಲೈಲಿ ತಂಙಳ್ ಮಾರ್ನಳ್ಳಿ, ಹಾಸನ, ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ, ಡಿ.ಕೆ.ಉಮರ್ ಸಖಾಫಿ ಕಂಬಳಬೆಟ್ಟು, ಗುಡ್ವಿಲ್ ಮೊಯ್ದಿನ್ ಹಾಜಿ ಉಡುಪಿ, ಯೂಸುಫ್ ಹಾಜಿ ಚಿಕ್ಕಮಗಳೂರು, ಬಶೀರ್ ಮದನಿ ಬೆಂಗಳೂರು, ಅಬ್ದುಲ್ ಹಫೀಳ್ ಸಅದಿ ಕೊಡಗು, ಸಿ.ಎಚ್.ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ, ಅಬೂಬಕರ್ ಸ ಅದಿ ಮಜೂರು, ಕೆ.ಪಿ.ಅಬೂಬಕರ್ ಚಿಕ್ಕಮಗಳೂರು ಹಾಗೂ ಜಿಲ್ಲಾ, ಸೆಂಟರ್ ಸಮಿತಿಗಳ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ದಅವಾ ಕಾರ್ಯದರ್ಶಿಗಳು ಈ ಕ್ಯಾಂಪ್ ನಲ್ಲಿ ಭಾಗವಹಿಸಿದ್ದರು.
ಈವೆಂಟ್ ಕಾರ್ಯದರ್ಶಿ ಅಶ್ರಫ್ ಕಿನಾರ ಸ್ವಾಗತಿಸಿ, ವಂದಿಸಿದರು.
‘ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿ’ ಎಂಬ ಘೋಷಣೆಯೊಂದಿಗೆ ಇಜ್ತಿನಾಬ್-90 ಎಂಬ ಹೆಸರಲ್ಲಿ ಜಾಗೃತಿ ಸಭೆಗಳು ಮಾ.13ರಿಂದ ಜೂನ್ 11ರ ತನಕ 90 ದಿನಗಳ ಕಾರ್ಯಕ್ರಮ ರಾಜ್ಯದ ಎಲ್ಲ ಸೆಂಟರ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ.








