ಉಳ್ಳಾಲ ದರ್ಗಾಕ್ಕೆ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಭೇಟಿ

ಉಳ್ಳಾಲ: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ರವಿವಾರ ಭೇಟಿ ನೀಡಿ ಝಿಯಾರತ್ ನಡೆಸಿದರು.
ಈ ಸಂದರ್ಭದಲ್ಲಿ ಸಯ್ಯದ್ ಮದನಿ ದರ್ಗಾದ ವತಿಯಿಂದ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಸನ್ಮಾನಿಸಲಾಯಿತು.
ಉಳ್ಳಾಲ ದರ್ಗಾದಲ್ಲಿ ಸುನ್ನತ್ ಜಮಾಅತಿನ ಆದರ್ಶದೊಂದಿಗೆ ಆಡಳಿತ ನಡೆಸುವ ಎಲ್ಲಾ ಆಡಳಿತ ವರ್ಗದವರಿಗೆ, ಸದಸ್ಯರಿಗಾಗಿ ಅವರು ಪ್ರಾರ್ಥಿಸಿದರು.
ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಲೆಕ್ಕ ಪರಿಶೋಧಕರಾದ ಯು.ಟಿ. ಇಲ್ಯಾಸ್, ಜೊತೆ ಕಾರ್ಯದರ್ಶಿ ನೌಶಾದ್ ಮತ್ತು ಆಝಾದ್ ಇಸ್ಮಾಯಿಲ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ ಜೊತೆ ಕಾರ್ಯದರ್ಶಿ ಆಶೀಫ್ ಅಬ್ದುಲ್ಲ, ಹಾಗೂ ಮುಮ್ತಾಝ್ ಅಲಿ, ಝೈನುದ್ದೀನ್ ಕಾಮಿಲ್ ಸಕಾಫಿ, ಅಶ್ರಫ್ ಕಿನಾರ ಮೊದಲಾದವರು ಉಪಸ್ಥಿತರಿದ್ದರು.
Next Story





