ಮಾ.17ರಿಂದ ತುಳುಚಿತ್ರ ಕಲಾವಿದರ ಕ್ರಿಕೆಟ್ ಕ್ರೀಡಾ ಕೂಟ 'ಸಿಪಿಎಲ್' ಪಂದ್ಯಾಟ

ಮಂಗಳೂರು,ಮಾ.15:ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ (ರಿ) ಮಂಗಳೂರು ಇದರ ಆಶ್ರಯದಲ್ಲಿ ನಡೆಯುವ 5ನೇ ವರ್ಷದ ಸೆಲೆಬ್ರಿಟಿ ಕ್ರಿಕೆಟ್ ಪಂದ್ಯಾಟ ಮಾ.17ರಿಂದ 21ರವರೆಗೆ ತುಳು ಚಿತ್ರರಂಗದ ಕಲಾವಿದರ ತಂಡಗಳ ನಡುವೆ ನಡೆಯಲಿದೆ. ಮಾ.16ರಂದು ಸಾಂಸ್ಕೃತಿಕ ಕಾರ್ಯಕ್ರಮಗಳನೊಂದಿಗೆ ಜೆರ್ಸಿಲಾಂಚ್ ಹಾಗೂ ಟ್ರೋಫಿ ಲಾಂಚ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಸಂಘಟನೆಯ ಅಧ್ಯಕ್ಷ ಮೊಹನ್ ಕೊಪ್ಪಲ ಕದ್ರಿ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದಾರೆ.
ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 7ರ ತನಕ ಮಂಗಳೂರು ನೆಹರೂ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟಗಳನ್ನು ನಡೆಯಲಿದೆ.
ಮಾ16ರ ಕಾರ್ಯಕ್ರಮದಲ್ಲಿ ಸನ್ ಪ್ರೀಮಿಯರ್ ಆಯಿಲ್ ಎಂ.ಡಿ. ವೆಂಕಟ್, ನಂದಿನಿ ಮಂಗಳೂರು ಮಾರ್ಕೆಟಿಂಗ್ ವ್ಯವಸ್ಥಾಪಕ ಜಯದೇವಪ್ಪ, ಕಾಂಚನ ಮೋಟರ್ಸ್ ವ್ಯವಸ್ಥಾಪಕ ಪ್ರತೀಕ್, ಮಂಗಳೂರಿನ ಪೋಲಿಸ್ ಆಯುಕ್ತ ಶಶಿಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್, ಕಾಂಗ್ರೆಸ್ ಯೂತ್ ಅಧ್ಯಕ್ಷ ಲುಕ್ಮಾನ್, ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮೋಹನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಸುಹಾನ್ ಪ್ರಸಾದ್, ಸಚಿನ್ ಶೆಟ್ಟಿ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ವಿಶ್ವಾಸ್ ಗುರುಪುರ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಜ್ವಲ್ ಅತ್ತಾವರ, ಕ್ರೀಡಾ ಕಾರ್ಯದರ್ಶಿ ನಿಕಿಲ್ ಕೊಟ್ಟಾರಿ, ನಾಯಕ ನಟರಾದ ಪ್ರತೀಕ್ ಶೆಟ್ಟಿ, ಹಿತೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.







