ಕೋಡಿ, ಕುಂಭಾಶಿ, ಶಿರ್ವ ಗ್ರಾಪಂ ಉಪಚುನಾವಣೆ: ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆ ಇಲ್ಲ
ಉಡುಪಿ, ಮಾ.15: ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಪಂನ 12 ಸ್ಥಾನಗಳಿಗೆ, ಕುಂದಾಪುರ ತಾಲೂಕಿನ ಕುಂಭಾಶಿ ಗ್ರಾಪಂನ ಒಂದು ಹಾಗೂ ಕಾಪು ತಾಲೂಕು ಶಿರ್ವ ಗ್ರಾಪಂನ ಒಂದು ಸ್ಥಾನ ಸೇರಿದಂತೆ ಒಟ್ಟು 14 ಸ್ಥಾನಗಳಿಗೆ ಮಾ.29ರಂದು ನಡೆಯುವ ಉಪಚುನಾವಣೆಗೆ ಜಿಲ್ಲಾಧಿಕಾರಿಗಳು ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ.
ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಕೋಡಿ ಗ್ರಾಪಂನ 12 ಸ್ಥಾನಗಳು ಸೇರಿದಂತೆ ಒಟ್ಟು 14 ಸ್ಥಾನಗಳಿಗೆ ಮಾ.29ರಂದು ಮತದಾನ ನಡೆಯಲಿದೆ.
ಜನರು ಮತದಾನ ಬಹಿಷ್ಕರಿಸಿ ನಾಮಪತ್ರವನ್ನೇ ಸಲ್ಲಿಸದ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಗ್ರಾಪಂಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯ ವೇಳೆ ಕೋಡಿ ಗ್ರಾಪಂಗೆ ಮತದಾನ ನಡೆದಿರಲಿಲ್ಲ. ಮಾ.19 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾ.22 ನಾಮಪತ್ರ ಹಿಂದೆಗೆತಕ್ಕೆ ಕೊನೆಯ ದಿನವಾಗಿದೆ.
Next Story





