ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಪ್ರಕರಣ ದಾಖಲು
ಮಂಗಳೂರು, ಮಾ.15: ಪ್ರಕರಣವೊಂದರ ಸ್ಥಳ ಮಹಜರು ಪ್ರಕ್ರಿಯೆಗಾಗಿ ಹಾಸನದಿಂದ ಮಂಗಳೂರಿಗೆ ಬಂದಿದ್ದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ಮಹಿಳಾ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಒಬ್ಬರು ಅಪರಾಧ ಪ್ರಕರಣವೊಂದರಲ್ಲಿ ತಕ್ಷೀರು ಸ್ಥಳದ ಮಹಜರು ನಡೆಸಲು ಮಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಕದ್ರಿ ಪೊಲೀಸರ ಸಹಕಾರ ಪಡೆದಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ ಆರೋಪಿ ಮರ್ವಿನ್ ಜರಾರ್ಡ್ ಸಾವಿಯೋ ಸಿಕ್ವೇರ್ ವಾಸವಾಗಿದ್ದ ಮಂಗಳೂರಿನ ಫ್ಲ್ಯಾಟ್‌ಗೆ ಪೊಲೀಸ್ ತಂಡ ಭೇಟಿ ನೀಡಿತು. ಈ ವೇಳೆ ಆರೋಪಿಯ ತಾಯಿ ಐರಿನ್ ಸಿಕ್ವೇರಾ ಹಾಗೂ ಆರೋಪಿಯ ಪರ ನ್ಯಾಯವಾದಿ ಪ್ರವೀಣ್ ಪಿಂಟೊ ಎಂಬವರು ಪೊಲೀಸ್ ತಂಡಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





